ಸುದ್ದಿ

ಬೆಳ್ಳಂಬೆಳಗ್ಗೆ ಶುರುವಾದ ಮಳೆ: ರಾಜಧಾನಿಯಲ್ಲಿ ಅವಾಂತರ ಸೃಷ್ಟಿ

Share It

ಬೆಂಗಳೂರು: ಬೆಳ್ಳಂಬೆಳಗ್ಗೆ ಆರಂಭವಾದ ಮಳೆ ನಗರದಲ್ಲಿ ಅವಾಂತರ ಸೃಷ್ಟಿ ಮಾಡಿದ್ದು, ಓಕಳೀಪುರಂ ಅಂಡರ್ ಪಾಸ್‌ನಲ್ಲಿ ಗಂಟೆಗಟ್ಟಲೇ ವಾಹನ ಸಂಚಾರ ದಟ್ಟಣೆ ಉಂಟಾಗಿದೆ.

ಆಟೋಗಳು, ಬೈಕ್‌ಗಳಿಗೆ ನೀರು ತುಂಬಿಕೊಂಡಿದ್ದು, ವಾಹನ ಸವಾರರು ಪರದಾಟ ನಡೆಸುತ್ತಿದ್ದಾರೆ. ಮರ‍್ನಾಲ್ಕು ಆಟೋಗಳ ಸೈಲೆಂಸೆರ್‌ಗೆ ನೀರು ತುಂಬಿಕೊಂಡು ಆಟೋ ಕೆಟ್ಟುನಿಂತಿವೆ. ಬೈಕ್ ಸವಾರರು ತಮ್ಮ ಬೈಕ್‌ಗಳನ್ನು ತಳ್ಳಿಕೊಂಡು ಹೋಗುತ್ತಿರುವ ದೃಶ್ಯ ಕಂಡುಬಂತು.

ಅಂಬುಲೆನ್ಸ್ ವೊಂದು ರೋಗಿಯನ್ನು ಹೊತ್ತು ಯೂಟರ್ನ್ ತೆಗೆದುಕೊಳ್ಳಲು ಪರದಾಟ ನಡೆಸಿದ ಘಟನೆ ಓಕಳಿಪುರಂ ಅಂಡರ್ ಪಾಸ್ ಬಳಿ ನಡೆಯಿತು. ಒಂದರಿಂದ ಎರಡು ಅಡಿಯಷ್ಟು ನೀರು ತುಂಬಿಕೊಂಡಿದ್ದು, ವಾಹನ ಸವಾರರು ಭಯಗೊಂಡು ವಾಹನಗಳನ್ನು ನೀರಿಗಿಳಿಸಲು ಯೋಚಿಸುವಂತಾಗಿತ್ತು.

ನಗರದ ವಿವಿದೆಡೆ ಸುರಿದ ಮಳೆಯಿಂದಾಗಿ ಇಡೀ ನಗರದಲ್ಲಿ ವಾಹನ ಸಂಚಾರ ದಟ್ಟಣೆ ಕಷ್ಟಕರವಾಗಿತ್ತು. ಬೆಳ್ಳಂಬೆಳಗ್ಗೆ ಕೆಲಸಕ್ಕೆ ತೆರಳುತ್ತಿದ್ದವರು ಇದರಿಂದ ಪರದಾಟ ನಡೆಸಬೇಕಾಗಿತ್ತು. ಕಚೇರಿಗಳಿಗೆ ಸರಿಯಾದ ಸಮಯಕ್ಕೆ ಹೋಗಲು ಸಾಧ್ಯವಾಗದೆ ಪರದಾಟ ನಡೆಸಿದರು.

ಬಿಬಿಎಂಪಿ ಮತ್ತು ಸರಕಾರಕ್ಕೆ ವಾಹನ ಸವಾರರು ಹಿಡಿಶಾಪ ಹಾಕುವ ಘಟನೆ ಅಲ್ಲಲ್ಲಿ ನಡೆಯಿತು. ಕೆಲವು ಕಡೆ ಮರಗಳು ರಸ್ತೆಗುರುಳಿಬಿದ್ದ ಘಟನೆ ವರದಿಯಾಗಿದೆ. ಇದರಿಂದ ಕೆಲವು ವಾಹನಗಳು ಜಖಂಗೊAಡಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪ್ರಾಯ ವರದಿಯಾಗಿಲ್ಲ.


Share It

You cannot copy content of this page