ಸುದ್ದಿ

ನಕಲಿ ಜಾತಿ ಪ್ರಮಾಣಪತ್ರ ಪಡೆದವರ ವಿರುದ್ಧ ಕ್ರಮಕ್ಕೆೆ ಮನವಿ

Share It

ಅಥಣಿ: ನಕಲಿ ಜಾತಿ ಪ್ರಮಾಣಪತ್ರ ಪಡೆದು ದುರುಪಯೋಗ ಪಡಿಸಿಕೊಂಡವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ದಲಿತ ಕ್ರಾಾಂತಿ ಸೇನೆ ಕಾರ್ಯಕರ್ತರು ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.

ತಾಲೂಕಿನ ಐಗಳಿ ಗ್ರಾಮದ ನಿವೃತ್ತ ಪ್ರಾಥಮಿಕ ಶಾಲಾ ಶಿಕ್ಷಕರಾದ ಹಂಪವ್ವ ರಾಯಪ್ಪ ಶಿಂಗಿ ಅವರು ಲಿಂಗಾಯತ ಜಾತಿಗೆ ಸೇರಿದ ವಿರೇಶಗೌಡ ಕುಮಾರಗೌಡ ಎಂಬುವವರನ್ನು ವಿವಾಹವಾಗಿದ್ದು, ಅವರ ಪುತ್ರಿಯರಾದ ಸವಿತಾ ಶಿಂಗಿ ಮತ್ತು ಸರೀತಾ ಶಿಂಗಿ ಎಂಬುವವರು ಎಸ್‌ಸಿ ಜಾತಿ ಪ್ರಮಾಣ ಪತ್ರ ಪಡೆದು ನೌಕರಿ ಗಿಟ್ಟಿಸಿಕೊಂಡಿದ್ದಾರೆ. ಅವರ ಪುತ್ರ ವಿನೋದ ಶಿಂಗಿ ಎಂಬುವವರು ದಲಿತ ಕೋಟಾದಲ್ಲಿ ಎಲ್‌ಎಲ್‌ಬಿವರೆಗೂ ಶಿಕ್ಷಣ ಪಡೆದು, ಸರಕಾರಿ ಶಿಷ್ಯ ವೇತನ ಪಡೆದಿದ್ದಾರೆ.

ಅಲ್ಲದೆ, ತಮ್ಮ ಕುಟುಂಬದ ಆದಾಯ ಪ್ರಮಾಣಪತ್ರವನ್ನು ಕೇವಲ 10 ಸಾವಿರ ರೂ. ಇದೆ ಎಂದು ಸುಳ್ಳು ಪ್ರಮಾಣ ಪತ್ರ ಪಡೆದಿದ್ದಾರೆ. ತಂದೆ-ತಾಯಿ ಬೇರೆ ಬೇರೆ ಜಾತಿಯವರಾಗಿದ್ದರೆ ಕಾನೂನು ಪ್ರಕಾರ ತಂದೆಯ ಜಾತಿಯೇ ಮಕ್ಕಳಿಗೂ ಅನ್ವಯವಾಗುತ್ತದೆ. ಆದರೆ ಈ ಪ್ರಕರಣದಲ್ಲಿ ತಾಯಿಯ ಜಾತಿಯ ಪ್ರಮಾಣಪತ್ರವನ್ನು ಮಕ್ಕಳು ಪಡೆಯುವ ಮೂಲಕ ನಿಜವಾದ ಎಸ್‌ಸಿ ಸಮುದಾಯಕ್ಕೆ ವಂಚನೆ ಮಾಡಿದ್ದಾರೆ. ಆದ್ದರಿಂದ ಕೂಡಲೇ ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕ್ರಾಾಂತಿ ಸೇನೆ ಕಾರ್ಯಕರ್ತರು ಆಗ್ರಹಿಸಿದ್ದಾರೆ.


Share It

You cannot copy content of this page