ಮೈಸೂರು: ಮೈಸೂರಿನಲ್ಲಿ ನಡೆದ ಮಹಿಷ ಮಂಡಲೋತ್ಸವದಲ್ಲಿ ಪ್ರೊ. ಭಗವಾನ್ ಮತ್ತು ಹಿಂದೂ ಧರ್ಮದ ವಿರುದ್ಧ ಗುಡುಗಿದ್ದಾರೆ.
ಹಿಂದೂ ಧರ್ಮ ಎಂದರೆ ಅದು ಭ್ರಾಹ್ಮಣರ ಧರ್ಮ. ಹಿಂದೂ ಎಂದರೆ ಹೀನಾಯವಾಗಿ ಬದುಕುವವನು ಎಂದರ್ಥ. ಹಿಂದೂ ಎಂದರೆ ಹಿಂದಕ್ಕೆ ಹೋಗುವುದು ಎಂಬ ಅರ್ಥವಿದೆ. ಹಿಂದೂ ಧರ್ಮದಲ್ಲಿ ಶೂದ್ರರನ್ನೇ ದವಸ್ಥಾನದ ಒಳಗೆ ಬಿಡುವುದಿಲ್ಲ ಎಂದು ಕಿಡಿಕಾರಿದ್ದಾರೆ.
ಶೂದ್ರರು ಹಿಂದೂ ಧರ್ಮದಲ್ಲಿ ಇರಬಾರದು. ನಾವು ಶೂದ್ರರು ಎಂದು ಒಪ್ಪಿಕೊಳ್ಳಬೇಕಾ? ಗುಲಾಮ ಎಂದು ಕರೆಯುವ ಧರ್ಮದಲ್ಲಿ ನಾವು ಬದುಕಬೇಕಾ? ಶೂದ್ರರು ಸೂಳೆಗೆ ಹುಟ್ಟಿದವರು ಎಂದು ಹೇಳುವ ಧರ್ಮದಲ್ಲಿ ನಾವೆಲ್ಲ ಬದುಕಬೇಕಾ ಎಂದು ಭಗವಾನ್ ಪ್ರಶ್ನಿಸಿದ್ದಾರೆ.
ನಾನು ದೇವಸ್ಥಾನಕ್ಕೆ ಹೋಗಿ ೫೦ ವರ್ಷ ಆಯ್ತು, ದೇವಸ್ಥಾನ ಕಟ್ಟಿದ ಶೂದ್ರರನ್ನೇ ದೇವಸ್ಥಾನದ ಒಳಗೆ ಬಿಟ್ಟುಕೊಳ್ಳದ ಧರ್ಮದಲ್ಲಿ ನಾವೆಲ್ಲರೂ ಇರಬೇಕಾ? ನಾನು ಹೇಳಿದ್ದನ್ನು ಕೇಳದಿದ್ದರೆ ನಿಮಗೆ ಸ್ವರ್ಗ ಸಿಗುವುದಿಲ್ಲ ಎಂದು ಶ್ರೀಕೃಷ್ಣ ಹೇಳುತ್ತಾನೆ, ನಾನು ಹೇಳಿದ್ದನ್ನು ಕೇಳಿದರೆ ಸ್ವರ್ಗ ಸಿಗುತ್ತದೆ ಎಂದು ಪ್ರವಾದಿ ಹೇಳುತ್ತಾನೆ. ಆದರೆ, ಸ್ವರ್ಗ ನರಕವೆಲ್ಲವೂ ನಮ್ಮ ಬದುಕಿನಲ್ಲಿಯೇ ಇದೆ ಎನ್ನುತ್ತದೆ ಬೌದ್ಧ ಧರ್ಮ. ಹೀಗಾಗಿ, ನಾವೆಲ್ಲರೂ ಬುದ್ಧನ ಅನುಯಾಯಿಗಳಾಬೇಕು ಎಂದು ಕರೆ ನೀಡಿದರು.
updating…