ಬೆಂಗಳೂರು: ಎರಡು ತಿಂಗಳಿAದ ಗೃಹಲಕ್ಷ್ಮೀ ಹಾಗೂ ಅನ್ನಭಾಗ್ಯದ ಹಣ ಬಿಡುಗಡೆಯಾಗದೆ ಇರುವ ವಿಚಾರದಲ್ಲಿ ತಲೆದೋರಿರುವ ಅನುಮಾನವನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ನಿವಾರಿಸಿದ್ದಾರೆ. ಗ್ಯಾರಂಟಿಗಳನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ.
ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುತ್ತಾರೆ ಎಂದು ಪ್ರತಿಪಕ್ಷಗಳು ಆರಂಭದಿAದಲೂ ಹೇಳುತ್ತಲೇ ಬರುತ್ತಿವೆ. ಪ್ರತಿಪಕ್ಷಗಳು ಮಾತ್ರವೇ ನಮ್ಮನ್ನು ಟೀಕೆ ಮಾಡ್ತಿದ್ದಾರೆ, ರಾಜ್ಯದ ಜನತೆ ನಮ್ಮ ಮೇಲೆ ನಂಬಿಕೆಯಿಟ್ಟಿದ್ದಾರೆ. ಕಳೆದ ತಿಂಗಳಷ್ಟೇ ಲಕ್ಷ್ಮೀ ಹಣ ಕೊಡಲು ಸಾಧ್ಯವಾಗಿಲ್ಲ. ಈ ತಿಂಗಳು ಪಾವತಿ ಮಾಡಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.
ಗ್ಯಾರಂಟಿ ಯೋಜನೆಗಳು ನಮ್ಮ ಸರಕಾರದ ಮಹಾತ್ವಾಕಾಂಕ್ಷೆಯ ಯೋಜನೆಗಳು. ಇದನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಕಾರಣಾಂತರದಿAದ ಕಳೆದ ತಿಂಗಳು ಲಕ್ಷ್ಮೀ ಹಣ ಹಾಗೂ ಅನ್ನಭಾಗ್ಯದ ಹಣ ಫಲಾನುಭವಿಗಳ ಖಾತೆಗೆ ಜಮೆಯಾಗಿಲ್ಲ. ಈ ತಿಂಗಳು ಬಾಕಿ ಸೇರಿ ಎಲ್ಲವೂ ಜಮೆಯಾಗಲಿದೆ ಎಂದರು.