ಬೆಂಗಳೂರು: ತಾನು ಸಂಪಾದನೆ ಮಾಡಿದ ಮೂರು ಸಾವಿರ ಎಕರೆ ಜಮೀನನ್ನು ಮಠವೊಂದಕ್ಕೆ ದಾನಿ ಮಾಡಿದ ಮಹಾಕಣ್ಣನೊಬ್ಬ, ತಾನು ಸನ್ಯಾಸತ್ವ ಸ್ವೀಕಾರ ಮಾಡಲು ಸಜ್ಜಾಗಿದ್ದಾರೆ.
ರಾಜಸ್ಥಾನದ ಉದ್ಯಮಿಯೊಬ್ಬರು ಮಾಗಡಿ ತಾಲೂಕಿನ ಪಾಲನಹಳ್ಳಿ ಮಠಕ್ಕೆ ತನ್ನ ಸಂಪಾದನೆಯ ೩ ಸಾವಿರ ಎಕರೆ ಜಮೀನುನ್ನು ದಾನ ಮಾಡಿದ್ದಾರೆ. ಪಿ.ಬಿ.ಓಸ್ವಾಲ್ ಎಂಬ ಉದ್ಯಮಿಯೇ ಇಂತಹ ಮಹಾದಾನದ ಕೆಲಸ ಮಾಡಿರುವ ಉದ್ಯಮಿ. ಇವರು ತಮ್ಮ 78 ನೇ ವಯಸ್ಸಿನಲ್ಲಿ ಇಂತಹ ತೀರ್ಮಾನ ತೆಗೆದುಕೊಂಡಿದ್ದು, ಇಡೀ ರಾಜ್ಯದ ಉಬ್ಬೇರಿಸುವಂತೆ ಮಾಡಿದೆ.
ತಮ್ಮ ಜೀವಮಾನವಿಡೀ ಸಂಪಾದನೆ ಮಾಡಿದ ಎಲ್ಲ ಆಸ್ತಿಯನ್ನು ಓಸ್ವಾಲ್ ದಾನ ಮಾಡಿದ್ದಾರೆ. ತಮಗೆ ಪಿತ್ರಾರ್ಜಿತವಾಗಿ ಬಂದ ಆಸ್ತಿಯನ್ನಷ್ಟೇ ತಮ್ಮ ಮಕ್ಕಳಿಗೆ ಹಂಚಿಕೆ ಮಾಡಿದ್ದಾರೆ. ತಾನು ಕರ್ನಾಟಕಕ್ಕೆ ಬಂದು ಉದ್ಯಮ ಆರಂಭಿಸಿದ ದಿನದಿಂದ ಪಾಲನಹಳ್ಳಿ ಮಠದ ಭಕ್ತರಾಗಿದ್ದ ಉದ್ಯಮಿ, ತಮಗೆ ಮಠದ ಆಶೀರ್ವಾದದಿಂದಲೇ ಇಷ್ಟೆಲ್ಲ ಸಂಪಾದನೆಯಾಗಿದೆ ಎಂದು ನಂಬಿದ್ದರು.
ಈ ನಂಬಿಕೆಯಿAದಲೇ ಪಾಲನಹಳ್ಳಿ ಮಠಕ್ಕೆ ತಮ್ಮೆಲ್ಲ ಸಂಪಾದನೆಯ ಆಸ್ತಿ ದಾನ ಮಾಡಿದ್ದು, ತಾನು ಕೂಡ ಸನ್ಯಾಸತ್ವ ಸ್ವೀಕಾರ ಮಾಡಿ, ಮೋಕ್ಷ ಸಾಧನೆಗೆ ಮುಂದಾಗಿರುವುದಾಗಿ ತಿಳಿಸಿದ್ದಾರೆ. ಈ ದಾನಶೂರ ಉದ್ಯಮಿಯ ನಿರ್ಧಾರ ಜನಮೆಚ್ಚುಗೆ ಗಳಿಸಿದೆ.