ಮೂಡಾ ಸೈಟ್ ವಾಪಸ್ ಮಾಡಲು ಆಯುಕ್ತರಿಗೆ ಸಿಎಂ ಪತ್ನಿ ಪತ್ರ?
ಮೈಸೂರು: ತಾವು ಪಡೆದಿರುವ 14 ನಿವೇಶನಗಳನ್ನು ವಾಪಸ್ ಕೊಡಲು ತಾವು ಸಿದ್ಧವಿರುವುದಾಗಿ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರು, ಮೂಡಾ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ಮೂಡಾ ಹಗರಣ ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆವರೆಗೆ ಬೆಳೆದುಬಂದಿದೆ. ಕಳೆದ 40 ವರ್ಷದ ರಾಜಕೀಯ ಜೀವನದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಅಂಟಿಕೊಳ್ಳದ ಭ್ರಷ್ಟಾಚಾರದ ಕೊಳೆ ಮೂಡಾದಿಂದ ಅಂಟಿಕೊAಡಿದೆ. ಈ ಹಿನ್ನೆಲೆಯಲ್ಲಿ ತಾವು ಪಡೆದಿರುವ ಸೈಟ್ ಗಳನ್ನು ವಾಪಸ್ ಕೊಡಲು ಮುಂದಾಗಿರುವುದಾಗಿ ಸಿಎಂ ಪತ್ನಿ ಘೋಷಿಸಿದ್ದಾರೆ.
ಪತ್ರದಲ್ಲಿ ತಮ್ಮ 3.16 ಎಕರೆ ಜಮೀನಿಗೆ ಪ್ರತಿಯಾಗಿ ಅಭಿವೃದ್ಧಿ ಪಡಿಸಿದ ಲೇಔಟ್‌ನ ವಿಜಯ ನಗರ 3 ಮತ್ತು 4 ನೇ ಹಂತದಲ್ಲಿ ವಿವಿಧ ಅಳತೆಯ 14 ನಿವೇಶನಗಳನ್ನು ನೀಡಲಾಗಿತ್ತು. ಈ ನಿವೇಶನಗಳ ಕ್ರಯಪತ್ರವನ್ನು ರದ್ದುಗೊಳಿಸುವ ಮೂಲಕ ಹಿಂದುರುಗಿಸಲು ಬಯಸುತ್ತೇನೆ ಎಂದು ಸಿಎಂ ಪತ್ನಿ, ಪತ್ರದಲ್ಲಿ ಉಲ್ಲೇಖಿಸಿದ್ದಾರೆ.


