ರಾಮನಗರ: ಗಂಡನನ್ನು ತೊರೆದು ಪ್ರಿಯಕರನ ಜತೆ ಹೋಗಿದ್ದ ಮಹಿಳೆಯೊಬ್ಬಳು ತನ್ನ ಕಾಮದಾಟಕ್ಕೆ ಅಡ್ಡಿಯಾಗುತ್ತಾರೆ ಎಂಬ ಕಾರಣಕ್ಕೆ ತನ್ನ11 ತಿಂಗಳ ಮಗುವು ಸೇರಿ ಇಬ್ಬರು ಮಕ್ಕಳನ್ನು ಕೊಲೆ ಮಾಡಿರುವ ಧಾರುಣ ಘಟನೆ ರಾಮನಗರದಲ್ಲಿ ನಡೆದಿದೆ.
ಆರು ವರ್ಷಗಳ ಹಿಂದೆ ಸ್ವೀಟಿ ಎಂಬಾಕೆ ಶಿವು ಎಂಬಾತನನ್ನು ಮದುವೆಯಾಗಿದ್ದಳು. ಆದರೆ, ಕೆಲವು ದಿನಗಳ ಹಿಂದೆ ಶಿವುವನ್ನು ತೊರೆದು ಮಕ್ಕಳೊಂದಿಗೆ ಪರಾರಿಯಾಗಿದ್ದಳು. ಈ ನಡುವೆ ರಾಮನಗರದಲ್ಲಿ ಗ್ರೊಗೋರಿ ಪ್ರಾನ್ಸಿಸ್ ಎಂಬಾತನ ಜತೆಗೆ ಸಂಸಾರ ನಡೆಸುತ್ತಿದ್ದಳು.
ಪ್ರಾನ್ಸಿಸ್ ಜತೆಗೆ ಲೈಂಗಿಕ ಕ್ರಿಯೆ ನಡೆಸಲು ತನ್ನ 11 ವರ್ಷದ ಮಗು ಆಗಾಗ ಅಡ್ಡಿಯಾಗುತ್ತಿತ್ತು. ಶುಕ್ರವಾರ ರಾತ್ರಿ ಇಬ್ಬರು ಸಂಭೋಗ ಮಾಡುವಾಗ 11 ತಿಂಗಳ ಮಗು ಕಬೀಲನ್ ಅಳುತಿತ್ತು. ಇದರಿಂದ ರೊಚ್ಚಿಗೆದ್ದ ತಾಯಿ ಮತ್ತು ಪ್ರಿಯಕರ, ಕಬೀಲನ್ ಜತೆಗೆ 3 ವರ್ಷದ ಕಬೀಲ್ ಎಂಬ ಮಗುವನ್ನು ಸೇರಿಸಿ ಕತ್ತುಹಿಸುಕಿ ಕೊಲೆ ಮಾಡಿದ್ದಾರೆ.
ಸ್ಮಶಾನ ಕಾರ್ಮಿಕರ ದೂರಿನ ಅನ್ವಯ ತನಿಖೆ: ಸ್ಮಶಾನದಲ್ಲಿ ಮಣ್ಣು ಮಾಡಲು ಬಂದಾಗ ಇವರ ನಡೆ ಸ್ಮಶಾನ ಸಿಬ್ಬಂದಿಗೆ ಅನುಮಾನ ಮೂಡಿಸಿತ್ತು. ಆರೋಪಿಗಳು ಕಾಯಿಲೆಯಿಂದ ಮಕ್ಕಳು ಸತ್ತಿದ್ದಾರೆ ಎಂದು ನಾಟಕ ಮಾಡಿದ್ದರು. ಆ ವೇಳೆ ಸಿಬ್ಬಂದಿ ಅನುಮಾನಗೊಂಡು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಬಂದು ಶವ ತೆಗೆದು ನೋಡಿ ಆರೋಪಿಗಳನ್ನು ಬಂಧಿಸಿದ್ದಾರೆ.