ಕ್ರೀಡೆ ಸುದ್ದಿ

ವಿಜಯ್ ಹಜಾರೆ ಟ್ರೋಪಿ: ಕರ್ನಾಟಕ ಚಾಂಪಿಯನ್

Share It

ಬೆಂಗಳೂರು: ವಿಜಯ್ ಹಜಾರೆ ಏಕದಿನ ಟೂರ್ನಿಯಲ್ಲಿ ಕರ್ನಾಟಕ ಭರ್ಜರಿ ಗೆಲುವು ಸಾಧಿಸುವ ಮೂಲಕ ಮಯಾಂಕ್ ಅಗರ್ವಾಲ್ ನಾಯಕತ್ವದಲ್ಲಿ ಟ್ರೋಪಿಯನ್ನು ತನ್ನದಾಗಿಸಿಕೊಂಡಿದೆ.

ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ್ದ ಕರ್ನಾಟಕ ಫೈನಲ್ ಪಂದ್ಯದಲ್ಲೂ ಅದೇ ರೀತಿಯ ಪ್ರದರ್ಶನ ನೀಡಿತು. ಮೊದಲು ಬ್ಯಾಟ್ ಮಾಡಿದ ಕರ್ನಾಟಕ ಸ್ಮರಣ್ ರವಿಚಂದ್ರನ್ ಶತಕ ಮತ್ತು ಶ್ರೀಜಿತ್ ಮತ್ತು ಅಭಿನವ್ ಮನೋಹರ್ ಅವರ ಭರ್ಜರಿ ಅರ್ಧಶತಕಗಳ ನೆರವಿನಿಂದ 348 ರನ್ ಕಲೆಹಾಕಿತ್ತು.

ಮಯಾಂಕ್ ಅಗರ್ವಾಲ್ 38 ಎಸೆತಗಳಲ್ಲಿ 32 ರನ್ ಗಳಿಸಿದರೆ, ರವಿಚಂದ್ರನ್ 92 ಎಸೆತಗಳಲ್ಲಿ 101 ರನ್ ಗಳಿಸಿದರೆ, ಕೃಷ್ಣನ್ ಶ್ರೀಜಿತ್ 74 ಎಸೆತಗಳಲ್ಲಿ 78 ಹಾಗೂ 42 ಎಸೆತಗಳಲ್ಲಿ 76 ರನ್ ಗಳಿಸಿದರು.

ಗುರಿಯನ್ನು ಬೆನ್ನತ್ತಿದ ಕರ್ನಾಟಕದವರೇ ಆದ ಕರುಣ್ ನಾಯರ್ ನಾಯಕತ್ವದ ವಿದರ್ಭ ಕ್ರಿಕೆಟ್ ತಂಡ 48.2 ಓವರ್‌ಗಳಲ್ಲಿ 312 ರನ್‌ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು. ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ್ದ ನಾಯಕ ಕರುಣ್ ನಾಯರ್ ತಮ್ಮ ತವರು ತಂಡದ ಎದುರು ಮಂಕಾದರು.

ವಿದರ್ಭ ಪರ ಕರುಣ್ ನಾಯರ್, 31 ಎಸೆತಗಳಲ್ಲಿ 27 ರನ್, ಹರ್ಷ್ ದುಬೈ 30 ಎಸೆತಗಳಲ್ಲಿ 63 ಧ್ರುವ್ ಶೋರೈ 111 ಎಸೆತಗಳಲ್ಲಿ 110 ರನ್ ಗಳಿಸಿದರು. ಆದರೆ, ಅವರ ಶತಕ ಕೂಡ ಗೆಲುವಿಗೆ ಸಹಕಾರಿಯಾಗಲಿಲ್ಲ. ಕರ್ನಾಟಕದ ಪರವಾಗಿ ವಾಸುಕಿ ಕೌಶಿಕ್, ಪ್ರಸಿದ್ಧ್ ಕೃಷ್ಣ, ಅಭಿಲಾಷ್ ಶೆಟ್ಟಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿ ತಲಾ 3 ವಿಕೆಟ್ ಪಡೆದರು.


Share It

You cannot copy content of this page