ಆಟವಾಡುತ್ತಿದ್ದ ಬಾಲಕನಿಗೆ ಒದ್ದು ಬೀಳಿಸಿದ್ದ ಕಿಡಿಗೇಡಿ: ಬನಶಂಕರಿ ಪೊಲೀಸರಿಂದ ಬಂಧನ
ಬೆಂಗಳೂರು: ದಾರಿಯಲ್ಲಿ ಆಟವಾಡುತ್ತಿದ್ದ ಬಾಲಕನಿಗೆ ಕಾಲಿನಿಂದ ಒದ್ದು ಬೀಳಿಸಿದ್ದ ಯುವಕನನ್ನು ಬನಶಂಕರಿ ಪೊಲೀಸರು ಬಂಧಿಸಿದ್ದಾರೆ.
ರಂಜನ್ ಎಂಬುವ ವ್ಯಕ್ತಿಯೇ ಬಂಧಿತ. ಆತ ದಾರಿಯಲ್ಲಿ ಆಟವಾಡುತ್ತಿದ್ದ ನೀವ್ ಜೈನ್ ಎಂಭ ಬಾಲಕನನ್ನು ಕಾಲಿನಿಂದ ಒದ್ದು ಬೀಳಿಸಿದ್ದ, ಬಾಲಕನಿಗೆ ಗಾಯಗಳಾಗಿದ್ದವು. ಆತನಿಗೆ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಬಾಲಕನ ತಾಯಿ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ದೂರಿನ ಅನ್ವಯ ಬನಶಂಕರಿ ಪೊಲೀಸರು, ರಂಜನ್‌ನನ್ನು ಬಂಧಿಸಿ, ವಿಚಾರಣೆ ನಡೆಸಿದ್ದಾರೆ. ಆತ ನೀವ್ ಜೈನ್‌ಗೆ ಒದ್ದಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಜತೆಗೆ, ಮನೆಯ ಮುಂದೆ ಓಡಾಡುವಾಗ ಸಿಗುವ ಮಕ್ಕಳಿಗೆಲ್ಲ ಇದೇ ರೀತಿ ಒದ್ದು ಬೀಳಿಸುವ ಮನಸ್ಥಿತಿಯನ್ನು ರಂಜನ್ ಹೊಂದಿದ್ದಾನೆ ಎನ್ನಲಾಗಿದೆ.


