ಬಿಜೆಪಿ ಶಾಸಕ ಬೈರತಿ ಬಸವರಾಜ್ ಬಂಧನಕ್ಕೆ ಪೊಲೀಸರ ತಂಡ : ಸಿಐಡಿ ಕಚೇರಿ ಮುಂದೆ ಭದ್ರತೆ
ಬೆಂಗಳೂರು: ಬೈರತಿ ಬಸವರಾಜ್ ಬಂಧನಕ್ಕೆ ಮೂರು ಸಿಐಡಿ ತಂಡ ಕಾರ್ಯಾಚರಣೆ ನಡೆಸುತ್ತಿದ್ದು, ಶೀಘ್ರವೇ ಬಂಧಿಸಿ ಕರೆತರುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಸಿಐಡಿ ಕಚೇರಿ ಮುಂಭಾಗ ಬ್ಯಾರಿಕೇಟ್ ಅಳವಡಿಕೆ ಮಾಡಿ ಭದ್ರತೆ ಒದಗಿಸಲಾಗಿದೆ.
ಬಿಕ್ಲು ಶಿವ ಎಂಬ ರೌಡಿಶೀಟರ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಬಿಜೆಪಿ ಶಾಸಕ ಬೈರತಿ ಬಸವರಾಜ್ ಅರೆಸ್ಟ್ ಮಾಡಲು ಸಿಐಡಿ ಬಲೆ ಬೀಸಿದೆ. ಹೈಕೋರ್ಟ್ ಅವರಿಗೆ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಸಿಐಡಿ ಬಂಧನಕ್ಕೆ ಮುಂದಾಗಿದೆ.
ಕಳೆದ ವಾರವಿಡೀ ಬೆಳಗಾವಿ ಅಧಿವೇಶನದಲ್ಲಿದ್ದ ಶಾಸಕ ಬಸವರಾಜ್ ಭಾಗವಹಿಸಿದ್ದರು. ಬಂಧನದ ಸುಳಿವು ಸಿಗುತ್ತಿದ್ದಂತೆ ಅಧಿವೇಶನ ಮುಗಿಯುವ ಎರಡು ದಿನ ಮೊದಲೇ ಅಲ್ಲಿಂದ ಪರಾರಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಶೋಧಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಬಸವರಾಜ್ ಜತೆಗೆ ದೂರವಾಣಿ ಸಂಪರ್ಕದಲ್ಲಿರುವ ವ್ಯಕ್ತಿಗಳ ವಿಚಾರಣೆ ನಡೆಸಲಾಗಿದೆ. ಮಹಾರಾಷ್ಟçದಲ್ಲಿ ತಲೆ ಮರೆಸಿಕೊಂಡಿರಬಹುದು ಎಂಬ ಶಂಕೆಯ ಹಿನ್ನೆಲೆಯಲ್ಲಿ ಎರಡು ತಂಡ ಶೋಧ ನಡೆಸಿದೆ. ಶೀಘ್ರವೇ ಬಂಧಿಸಿ, ಕರೆತರುವ ಪ್ರಯತ್ನದಲ್ಲಿ ಪೊಲೀಸರು ಇದ್ದಾರೆ ಎಂದು ಮೂಲಗಳು ತಿಳಿಸಿವೆ.


