ಬೆಂಗಳೂರು: ಪ್ರಶಸ್ತಿಗಳ ಕಿರೀಟವನ್ನೇ ಮುಡಿಗೇರಿಸಿಕೊಂಡಿರುವ ದೇಶದ ಅತ್ಯುನ್ನತ ಸಾರ್ವಜನಿಕ ಸಾರಿಗೆ ಸಂಸ್ಥೆ ಕೆಎಸ್‌ಆರ್‌ಟಿಸಿಗೆ ಮತ್ತೇ ಏಳು ಪ್ರಶಸ್ತಿಗಳ ಗರಿ ಮೂಡಿದೆ.
ಸಂಸ್ಥೆಯು ಗ್ಲೋಬಲ್ ಮ್ಯಾನುಫ್ಯಾಕ್ಚರಿಂಗ್ ಅವಾರ್ಡ್ಸ್ ಅನ್ನು ಈ ಕೆಳಕಂಡ ವಿಭಾಗಗಳಲ್ಲಿ ಜಯಿಸಿದೆ. ಪ್ರಶಸ್ತಿ ವಿತರಣಾ ಸಮಾರಂಭವು ೨೧-೦೨-೨೦೨೫ ರಂದು ತಾಜ್ ಲ್ಯಾಂಡ್ಸ್ ಎಂಡ್, ಮುಂಬೈನಲ್ಲಿ ನಡೆಯಿತು.
೧. ಅತ್ಯುತ್ತಮ ಉದ್ಯೋಗದಾತ ಬ್ರಾಂಡ್
೨. ಕಂಪನಿಯಲ್ಲಿ ಆರೋಗ್ಯ ನಿರ್ವಹಣೆಗೆ ಅತ್ಯುತ್ತಮ ಕನಸುಗಳ ಉದ್ಯೋಗ ಸ್ಥಳ
೩. ವ್ಯಾಪಾರ ನಾಯಕತ್ವ ಪ್ರಶಸ್ತಿ – ಉದ್ಯೋಗಸ್ಥಳ ಮತ್ತು ಜನಾಭಿವೃದ್ಧಿ
೪. ವಿಶ್ವ ಆರೋಗ್ಯ ಸೇವಾ ಪ್ರಶಸ್ತಿ – ಉತ್ತಮ ಸಾರ್ವಜನಿಕ ಆರೋಗ್ಯ ಉಪಕ್ರಮ
೫. ವಿಶ್ವ ನಾವೀನ್ಯತೆ ಪ್ರಶಸ್ತಿ – ಆರೋಗ್ಯ ಸೇವಾ ತಂತ್ರಜ್ಞಾನದಲ್ಲಿ ಅತ್ಯುತ್ತಮ ನಾವೀನ್ಯತೆ
೬. ಜಾಗತಿಕ ಉತ್ಪಾದನಾ ನಾಯಕತ್ವ ಪ್ರಶಸ್ತಿ – ಸ್ಥಿರತೆಯ ಸಾಧನೆ
೭. ಡಿಜಿಟಲ್ ತಂತ್ರಜ್ಞಾನ ಪ್ರಶಸ್ತಿ
ಈ ವಿಭಾಗಗಳಲ್ಲಿ ಸಂಸ್ಥೆಯು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಕಾರ್ಯಕ್ರಮದಲ್ಲಿ ಡಾ. ಕೆ.ನಂದಿನಿದೇವಿ, ಸುಧಾರಾಣಿ ಉಪಮುಖ್ಯ ಗಣಕ ವ್ಯವಸ್ಥಾಪಕರು, ವಿಜಯಲಕ್ಷ್ಮಿ ಕಾರ್ಮಿಕ ಕಲ್ಯಾಣಾಧಿಕಾರಿ ಕೆ ಎಸ್ ಆರ್ ಟಿಸಿ ಅವರು, ಜಪಲೀನ್ ಕೌರ್ ಮುಖ್ಯಸ್ಥರು ಲೂಧಿಯಾನ ಬೇವರೆಜಸ್ ಲಿಮಿಟೆಡ್ ಸಂಸ್ಥೆ ಇವರು ಭಾಗವಹಿಸಿದ್ದರು.