ಕೊಲ್ಕತ್ತಾ ವೈದ್ಯೆ ಅತ್ಯಾಚಾರ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ

Share It

ಕೊಲ್ಕತ್ತಾ: ದೇಶಾದ್ಯಂತ ಸಂಚಲನ ಮೂಡಿಸಿದ್ದ ಕೊಲ್ಕತ್ತಾದ ಆರ್‌ಜಿ.ಕರ್ ವೈದ್ಯೆಯ ಅತ್ಯಾಚಾರ ಮತ್ತು ಕೊಲೆಯ ಪ್ರಕರಣದ ಆರೋಪಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ಪ್ರಕಟಿಸಿದೆ.

ಸೀಲ್ದಾಹ್‌ನ ಜಿಲ್ಲಾ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶ ಅರ್ನಿಬನ್ ದಾಸ್, ತೀರ್ಪು ಪ್ರಕಟ ಮಾಡಿದ್ದು, ಇದು ಅಪರೂಪದಲ್ಲಿ ಅಪರೂಪದ ಪ್ರಕರಣವಲ್ಲ, ಹೀಗಾಗಿ, ಅತ್ಯಾಚಾರ ಆರೋಪಿಗೆ ಗಲ್ಲು ಶಿಕ್ಷೆಯ ಅವಶ್ಯಕತೆಯಿಲ್ಲ ಎಂದು ಅಭಿಪ್ರಾಯಪಟ್ಟು ಜೀವಾವಧಿ ಶಿಕ್ಷೆ ಪ್ರಕಟಿಸಿದ್ದಾರೆ.

ತೀರ್ಪಿನ ಅನ್ವಯ ಆರೋಪಿ ಸಂಜಯ್ ರಾಯ್ ಜೀವನಪೂರ್ತಿ ಜೈಲಿನಲ್ಲಿರಲಿದ್ದಾನೆ. ಜತೆಗೆ ನ್ಯಾಯಾಲಯ ಆರೋಪಿಗೆ ೫೦ ಸಾವರ ರು ದಂಡ ವಿಧಿಸಿದೆ. ಸಂತ್ರಸ್ತೆಯ ಕುಟುಂಬಕ್ಕೆ ೧೭ ಲಕ್ಷ ರು. ಪರಿಹಾರ ನೀಡುವಂತೆ ಪಶ್ಚಿಮ ಬಂಗಾಳ ಸರಕಾರಕ್ಕೆ ನ್ಯಾಯಾಲಯ ಸೂಚನೆ ನೀಡಿದೆ.


Share It

You May Have Missed

You cannot copy content of this page