ಬೆಂಗಳೂರು: ಆರ್‌ಎಸ್‌ಎಸ್ ಮತ್ತು ಬಿಜೆಪಿಯವ್ರು ಅಪರಾಧ ಮಾಡ್ತೀರಿ, ಆದ್ರೆ, ನಾವೇನೂ ಮಾಡೋದೆಯಿಲ್ಲ ಎಂಬಂತೆ ನಟಿಸ್ತೀರಿ ಎಂದು ಸಿದ್ದರಾಮಯ್ಯ ಹೇಳಿದ್ದು, ಬಿಜೆಪಿ ಸದಸ್ಯರ ಆಕ್ಷೇಪಕ್ಕೆ ಕಾರಣವಾಗಿತ್ತು. ಈ ಹೇಳಿಕೆಯಿಂದಾಗಿ ಸದನವನ್ನು ಮುಂದೂಡಲಾಗಿದೆ.
ರಾಜ್ಯಪಾಲರ ಭಾಷಣದ ಮೇಲಿನ ಉತ್ತರದಲ್ಲಿ ಸಿಎಂ ಸಿದ್ದರಾಮಯ್ಯ, ಆರ್‌ಎಸ್‌ಎಸ್ ಮತ್ತು ಬಿಜೆಪಿಯ ಹೆಸರು ಉಲ್ಲೇಖ ಮಾಡಿ, ನೀವುಗಳು ಕೂಡ ಅಪರಾಧ ಮಾಡ್ತೀರಿ, ಆದರೆ, ಅಪರಾಧವನ್ನು ಯಾರೋ ಒಬ್ಬರು ಮಾಡುತ್ತಾರೆ ಎಂಬಂತೆ ಬಿಂಬಿಸುತ್ತೀರಿ ಎಂದು ಗುಡುಗಿದರು.
ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು, ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಲು ಮುಂದಾದರು. ಅವರ ಮನವೊಲಿಕೆಗೆ ಸ್ಪೀಕರ್ ಖಾದರ್ ಪ್ರಯತ್ನಿಸಿ, ಅಂತಿಮವಾಗಿ ಸದನವನ್ನು ಮುಂದೂಡಿದರು. ಸಿಎಂ ಸಿದ್ದರಾಮಯ್ಯ ಕ್ಷಮೆ ಕೋರಬೇಕು ಜತೆಗೆ, ತಾವು ನೀಡಿದ ಹೇಳಿಕೆಯನ್ನು ಹಿಂಪಡೆಯಬೇಕು ಎಂದು ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸಿದರು.