ಬೆಂಗಳೂರು: ನಿಗಮವು ಕೈಗೊಂಡಿರುವ ಬ್ರ್ಯಾಂಡಿಂಗ್ ಹಾಗೂ ಮಾನವ ಸಂಪನ್ಮೂಲ ಉಪಕ್ರಮಗಳಿಗಾಗಿ “ಟಿವಿ-9 ನೆಟ್ವರ್ಕ ಲೀಡರ್ಸ್ ಆಫ್ ರೋಡ್ ಟ್ರಾನ್ಸಪೋರ್ಟ್ 2024ರ ಪ್ರಶಸ್ತಿಯು ವರ್ಷದ ದೇಶದ ಅತ್ಯುತ್ತಮ ಸಂಸ್ಥೆ ವರ್ಗದಲ್ಲಿ ಲಭಿಸಿರುತ್ತದೆ.
ದ ಇಂಪೀರಿಯಲ್ ಜನಪತ್ ಲೇನ್, ಜನಪತ್, ನವದೆಹಲಿ ಇಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶ್ರೀ ಹರ್ಷ್ ಮಲೋತ್ರ,ಮಾನ್ಯ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ರಾಜ್ಯ ಸಚಿವರು ಮತ್ತು ಸಾಂಸ್ಥಿಕ ವ್ಯವಹಾರಗಳ ಸಚಿವರು, ಭಾರತ ಸರ್ಕಾರರವರು ನಿಗಮಕ್ಕೆ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಡಾ. ನಂದಿನಿದೇವಿ ಕೆ. ಭಾಆಸೇ., ನಿರ್ದೇಶಕರು (ಸಿಬ್ಬಂದಿ ಮತ್ತು ಜಾಗೃತ), ಕೆ ಎಸ್ ಆರ್ ಟಿ ಸಿ ರವರು ಪ್ರಶಸ್ತಿಯನ್ನು ಸ್ವೀಕರಿಸಿದರು.
