ಬೆಂಗಳೂರು: ಆಂಧ್ರ ಪ್ರದೇಶದಿಂದ ಬಂದು ಸರಣಿ ಸರಗಳ್ಳತನ ನಡೆಸಿ, ಪರಾರಿಯಾಗುತ್ತಿದ್ದ ಖತರ್ ನಾಕ್ ಕಳ್ಳರನ್ನು ದೊಡ್ಡಬಳ್ಳಾಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆಂಧ್ರ ಪ್ರದೇಶ ಮೂಲದ ಆರೋಪಿಗಳು, ಬೆಂಗಳೂರಿಗೆ ಆಗಮಿಸಿ, ಮೈಸೂರು, ದೊಡ್ಡಬಳ್ಳಾಪುರ ಮತ್ತು ವಾಪಸ್ ಆಂಧ್ರಕ್ಕೆ ತೆರಳುವಾಗ ಗುಂಜೂರು ಬಳಿ ಸರಣಿ ಸರಗಳ್ಳತನ ನಡೆಸಿದ್ದರು. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನ.೧೯ ರಂದು ನಡೆದಿದ್ದ ಪ್ರಕರಣದ ಬೆನ್ನತ್ತಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಪೊಲೀಸ್ ಇನ್ಸ್ಪೆಕ್ಟರ್ ಸಾಧಿಕ್ ಪಾಷಾ ನೇತೃತ್ವದ ತಂಡ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಆರೋಪಿಗಳಿಂದ ಲಕ್ಷಾಂತರ ರುಪಾಯಿ ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ.