ರಾಜಕೀಯ ಸುದ್ದಿ

ಉದ್ಧವ್ ಠಾಕ್ರೆ ಬಣದ 9 ಶಿವಸೇನೆ ಸಂಸದರು ಇಂಡಿಯಾ ಮೈತ್ರಿಕೂಟಕ್ಕೆ ಗುಡ್ ಬೈ?!

Share It

ದೆಹಲಿ: ದೆಹಲಿಯಲ್ಲಿ ಇಂದು ಗುರುವಾರ ನಡೆದ ಇಂಡಿಯಾ ಮೈತ್ರಿಕೂಟದ ಸಭೆಯಲ್ಲಿ ಎನ್.ಸಿ.ಪಿ ನಾಯಕ ಶರದ್ ಪವಾರ್ ಅವರು ಶಿವಸೇನೆ ಪಕ್ಷದ ಮುಖ್ಯಸ್ಥ ಹಾಗೂ ಮಹಾರಾಷ್ಟ್ರದ ಮಾಜಿ ಸಿಎಂ ಉದ್ದವ್ ಠಾಕ್ರೆ ಅವರನ್ನು ನೀವು ಹೊರಗೆ ಇರಿ ಎಂದು ಹೇಳಿರುವುದು ಇದೀಗ ದೊಡ್ಡ ರಾಜಕೀಯ ಸಂಕಲನಕ್ಕೆ ಕಾರಣವಾಗಿದೆ.

ಪರಿಣಾಮ ಮಹಾರಾಷ್ಟ್ರದ ಮಾಜಿ ಸಿಎಂ ಉದ್ಧವ್ ಠಾಕ್ರೆ ಅವರು ತಮ್ಮ ಮೊದಲ ಎನ್.ಡಿ.ಎ ಮೈತ್ರಿಕೂಟ ಸೇರಲು ಮುಂದಾಗಿದ್ದಾರೆ. ಈ ರಾಜಕೀಯ ಬದಲಾವಣೆ ಬಹುಮತದಿಂದ ದೂರ ಉಳಿದು ಕೊನೆಗೆ ಹಳೆಯ ಎನ್.ಡಿ.ಎ ಮೈತ್ರಿಕೂಟದ ಪಕ್ಷಗಳ ಬೆಂಬಲದಿಂದ ಸತತ 3ನೇ ಬಾರಿಗೆ ಕೇಂದ್ರ ಸರ್ಕಾರ ರಚಿಸಲು ರಾಷ್ಟ್ರಪತಿಗಳಿಂದ ಆಹ್ವಾನ ಪಡೆದಿರುವ ಬಿಜೆಪಿಗೆ ಉದ್ಧವ್ ಠಾಕ್ರೆ ಅವರ ಶಿವಸೇನೆ ಬೆಂಬಲ ಬಯಸದೇ ಬಂದ ಭಾಗ್ಯ ಎಂದೆನಿಸಿದೆ.

ಏಕೆಂದರೆ ಮಹಾರಾಷ್ಟ್ರದಲ್ಲಿರುವ 40 ಕ್ಷೇತ್ರಗಳ ಲೋಕಸಭಾ ಚುನಾವಣೆಯಲ್ಲಿ ಉದ್ಧವ್ ಠಾಕ್ರೆ ಅವರ ಶಿವಸೇನೆ ಬಣ 9 ಸ್ಥಾನಗಳನ್ನು ಪಡೆದಿದೆ. ಸದ್ಯ ಮಹಾರಾಷ್ಟ್ರ ರಾಜ್ಯದ ಸಿಎಂ ಆಗಿರುವ ಏಕನಾಥ್ ಶಿಂಧೆ ಅವರ ಶಿವಸೇನೆ ಬಣ ಸಹ 7 ಸಂಸದರನ್ನು ಗೆಲ್ಲಿಸಿಕೊಂಡಿದೆ.

ಆದರೆ ಉದ್ಧವ್ ಠಾಕ್ರೆ ಮತ್ತು ಏಕನಾಥ್ ಶಿಂಧೆ ಮತ್ತೆ ಒಂದಾಗಿ ಶಿವಸೇನೆ ಪಕ್ಷವನ್ನು ಒಂದುಗೂಡಿಸಿದರೆ ಆಗ ಬಿಜೆಪಿ ಶಿವಸೇನೆ ಪಕ್ಷವನ್ನು ಒಗ್ಗೂಡಿಸಿದಂತಾಗುತ್ತದೆ ಮತ್ತು ಈ ಮೂಲಕ ಸಲೀಸಾಗಿ 9 ಹೆಚ್ಚುವರಿ ಅಂದರೆ ಉದ್ಧವ್ ಠಾಕ್ರೆ ಬಣದ ಶಿವಸೇನೆ ಸಂಸದರ 9 ಮತಗಳನ್ನು ಪಡೆದಂತಾಗುತ್ತದೆ‌. ಪರಿಣಾಮ ಎನ್‌.ಡಿ.ಎ ಮೈತ್ರಿಕೂಟದ ಬಹುಮತದ ಸಂಖ್ಯೆ 296+9=305 ಕ್ಕೆ ಏರಿಕೆದಂತಾಗುತ್ತದೆ.


Share It

You cannot copy content of this page