ಶಿರಸಿ: ಪ್ರವಾಸಕ್ಕೆಂದು ತೆರಳಿದ್ದ ವಿದ್ಯಾರ್ಥಿಗಳಿದ್ದ ಖಾಸಗಿ ಬಸ್ಸೊಂದು ಪಲ್ಟಿಯಾಗಿದ್ದು, ಅಪಾಯದಿಂದ ಪಾರಾಗಿರುವ ಘಟನೆ ಕುಮಟಾ ಯಾಣ ಹೆದ್ದಾರಿಯಲ್ಲಿ ನಡೆದಿದೆ.
ದಾವಣಗೆರೆಯ ಜೈನ್ ಕಾಲೇಜಿನ ವಿದ್ಯಾರ್ಥಿಗಳು ಉತ್ತರ ಕನ್ನಡ ಜಿಲ್ಲೆಯ ವಿವಿಧ ಪ್ರöದೇಶಗಳಿಗೆ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಅಪಘಾತ ಸಂಭವಿಸಿದ್ದ ಬಸ್ ಪಲ್ಟಿಯಾಗಿದೆ. ಈ ವೇಳೆ ೧೨ ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಬಸ್‌ನಲ್ಲಿ ಜೈನ್ ಕಾಲೇಜಿನ ೨೦ ವಿದ್ಯಾರ್ಥಿಗಳು, ೨೭ ವಿದ್ಯಾರ್ಥಿನಿಯರು ಹಾಗೂ ಮೂವರು ಶಿಕ್ಷಕರು ಇದ್ದರು ಎನ್ನಲಾಗಿದೆ. ಇದೀಗ ೧೨ ಜನರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಯಾಣಗೆ ತೆರಳುವಾಗ ಬಸ್ ಅಪಘಾತವಾಗಿದೆ.

