ಜ್ಯೋತಿಷಿಯ ಸಲಹೆಯ ಮೇರೆ ಡಿಕೆಶಿ ಟೆಂಪಲ್ ರನ್ : ಗೋಕರ್ಣಕ್ಕೆ ಭೇಟಿ
ಬೆಂಗಳೂರು: ಸಿಎಂ ಖುರ್ಷಿಗಾಗಿ ಒಳಗೊಳಗೆ ಪಟ್ಟು ನಡೆಸುತ್ತಿರುವ ಡಿಸಿಎಂ ಡಿಕೆಶಿ, ಜ್ಯೋತಿಷಿಯೊಬ್ಬರ ಸಲಹೆಯ ಮೇರೆಗೆ ಗೋಕರ್ಣಕ್ಕೆ ಭೇಟಿ ನೀಡಲು ಸಿದ್ಧತೆ ನಡೆಸಿದ್ದಾರೆ.
ಕೋಕರ್ಣದ ಮಹಾಬಲೇಶ್ವರ ದೇವಸ್ಥಾನಕ್ಕೆ ಡಿಕೆಶಿ, ಶುಕ್ರವಾರ ಭೇಟಿ ನೀಡಲಿದ್ದಾರೆ. ಖ್ಯಾತ ಜ್ಯೋತಿಷಿಯೊಬ್ಬರು ಮಹಾಬಲೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಕೆ ಮಾಡಿದರೆ, ತಮ್ಮ ಇಷ್ಟಾರ್ಥ ಸಿದ್ಧಿಸಲಿದೆ ಎಂದು ಸಲಹೆ ನೀಡಿದ ಹಿನ್ನೆಲೆಯಲ್ಲಿ ಡಿಕೆಶಿ, ಈ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ.


