ಸಾರಿಗೆ ಸಿಬ್ಬಂದಿಗೆ ಗುಡ್ ನ್ಯೂಸ್ ಕೊಡುತ್ತಾ ಸರಕಾರ: ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದೇನು?
ಬೆಳಗಾವಿ: ಸಾರಿಗೆ ನಿಗಮಗಳ ಎಲ್ಲ ಸಿಬ್ಬಂದಿಯ ವೇತನ ಹೆಚ್ಚಳದ ಅಧಿವೇಶನದ ನಂತರ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.
ಆ ಮೂಲಕ ವೇತನ ಹೆಚ್ಚಳಕ್ಕೆ ಆಗ್ರಹಿಸಿ, ಪ್ರತಿಭಟನೆ ನಡೆಸುತ್ತಿದ್ದ ಸಾರಿಗೆ ಸಿಬ್ಬಂದಿಗೆ ಭರವಸೆಯ ಮಾತುಗಳನ್ನಾಡಿದ್ದಾರೆ. ವಿಧಾನ ಪರಿಷತ್‌ನಲ್ಲಿ ಈ ಸಂಬಂಧ ಮಾತನಾಡಿದ ಅವರು, ಸಾರಿಗೆ ಸಿಬ್ಬಂದಿಯ ವೇತನ ಹೆಚ್ಚಳ ಮಾಡಬೇಕೆಂಬ ಬೇಡಿಕೆಯಿದೆ. ಈ ಸಂಬಂಧ ಪ್ರತಿಭಟನೆಯನ್ನು ಸಂಘಟನೆಗಳು ನಡೆಸಿವೆ. ಅಧಿವೇಶನದ ನಂಥರ ಸಿಎಂ ಜತೆಗೆ ಚರ್ಚಿಸಿ ಶೀಘ್ರವೇ ತೀರ್ಮಾನ ಕೈಗೊರ್ಳಳುತ್ತೇವೆ ಎಂಧರು.
ಸಾರಿಗೆ ಸಿಬ್ಬಂದಿಗೆ ಪ್ರತಿ ನಾಲ್ಕು ವರ್ಷಕ್ಕೊಮ್ಮೆ ವೇತನ ಹೆಚ್ಚಳ ಆಗುತ್ತದೆ. ಆದರೆ, ಕರೋನಾ ಸಂದರ್ಭದಲ್ಲಿ ವೇತನ ಹೆಚ್ಚಳ ಮಾಡಲು ಆಗಿರಲಿಲ್ಲ. ಅನಂತರ 2023ರಲ್ಲಿ ವೇತನ ಹೆಚ್ಚಳ ಮಾಡಲಾಗಿದೆ. ಬಿಜೆಪಿ ಸರಕಾರದ ಅವಧಿಯಲ್ಲಿ ನಡೆಸಿದ ವೇತನ ಪರಿಷ್ಕರಣೆ ಆದೇಶದಲ್ಲೂ ಗೊಂದಲವಿತ್ತು. ಜತೆಗೆ, ಕಳೆದ ಬಜೆಟ್‌ನಲ್ಲೂ ಹಣ ಕೊಟ್ಟಿರಲಿಲ್ಲ. ಹೀಗಾಗಿ, ವೇತನ ಹೆಚ್ಚಳವಾಗಿರಲಿಲ್ಲ. ಇದೀಗ ಸಂಘಟನೆಗಳ ಹೋರಾಟ ನಡೆದು, ಅವರೆಲ್ಲರ ಜತೆಗೆ ಸಭೆ ನಡೆದಿದೆ. ಅಧಿವೇಶನ ಮುಗಿದ ನಂತರ ಸಿಎಂ ಜತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂಧರು.


