ಕಲಬುರಗಿ: ಕೆಲಸ ಮಾಡುವಾಗಲೇ ಮೃತಪಟ್ಟಿದ್ದ ಕಾರ್ಮಿಕನ ಮೃತದೇಹ ಸಂಸ್ಕಾರ ಮಾಡಲು ಪ್ರಾಣಿಯಂತೆ ಎಳೆದೊಯ್ದ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ.
ಕಲಬುರಗಿ ಜಿಲ್ಲೆಯ ಕೊಡ್ಲಾ ಬಳಿ ಘಟನೆ ನಡೆದಿದ್ದು, ಬಿಹಾರ ಮೂಲದ ಕಾರ್ಮಿಕನೊಬ್ಬ ಕೆಲಸ ಮಾಡುವಾಗಲೇ ಮೃತಪಟ್ಟಿದ್ದ. ಆತನ ಮೃಹದೇಹವನ್ನು ಸರಿಯಾಗಿ ಸಾಗಿಸದೆ ಅಮಾನವೀಯತೆ ಮೆರೆದಿರುವ ಘಟನೆ ನಡೆದಿದೆ.
ಘಟನೆಯ ವಿಡಿಯೋ ಇದೀಗ ವೈರಲ್ ಆಗಿದ್ದು, ಅಮಾನವೀಯವಾಗಿ ನಡೆದುಕೊಂಡವರ ಮೇಲೆ ಕ್ರಮಕ್ಕೆ ಆಗ್ರಹ ಹೆಚ್ಚಾಗಿದೆ.