ಅಪರಾಧ ಸುದ್ದಿ

18 ತಿಂಗಳ ಹಿಂದೆ ಕೊಲೆಯಾಗಿದ್ದ ಮಹಿಳೆ ಮತ್ತೇ ಜೀವಂತ: ಪೋಷಕರು, ಪೊಲೀಸರಿಗೆ ಆಘಾತ

Share It

ಇಂದೋರ್: 18 ವರ್ಷದ ಹಿಂದೆ ಮಹಿಳೆಯೊಬ್ಬರು ಕೊಲೆಯಾಗಿದ್ದರು. ಅವರ ಕುಟುಂಬ ಆಕೆಯ ಅಂತ್ಯಸಂಸ್ಕಾರ ನಡೆಸಿತ್ತು. ಪೊಲೀಸರು ನಾಲ್ವರು ಕೊಲೆಗಾರರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಈಗ ಆ ಮಹಿಳೆ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗಿದ್ದು, ಪೊಲೀಸರು ಮತ್ತು ಪೋಷಕರಿಗೆ ಅಚ್ಚರಿಯನ್ನುಂಟು ಮಾಡಿದೆ.

2023ರಲ್ಲಿ ಇಬ್ಬರು ಮಕ್ಕಳ ತಾಯಿಯೊಬ್ಬರು ಮಧ್ಯಪ್ರದೇಶದ ಮಂದ್ಸೌರ್ ಜಿಲ್ಲಾ ಕೇಂದ್ರದಿಂದ 120 ಕಿ.ಮೀ ದೂರದ ಗಾಂಧಿ ಸಾಗರ್‌ನಿಂದ ಕಾಣೆಯಾಗಿದ್ದಾರೆ ಎಂಬ ದೂರು ದಾಖಲಾಗಿತ್ತು. ಇಲ್ಲಿಂದ 150 ಕಿ.,ಮೀ ದೂರದ ದೆಹಲಿ-ಮುಂಬೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಹಿಳೆಯ ಕೊಳೆತ ಶವವೊಂದು ಪತ್ತೆಯಾಗಿತ್ತು. ಆಕೆಯ ಮುಖ ಮತ್ತು ತಲೆಯನ್ನು ಕಲ್ಲಿನಿಂದ ಚ್ಚಿ ಪುಡಿಪುಡಿ ಮಾಡಲಾಗಿತ್ತು.

ಈ ವೇಳೆ ಗಾಂಧಿ ಸಾಗರದಿಂದ ಬಂದ ಪೋಷಕರು ಆಕೆಯನ್ನು ತಮ್ಮ ಮಗಳೆಂದು ಗುರುತಿಸಿ, ಆಕೆ ಶಾರುಖ್ ಎಂಬಾತನ ಜತೆಗೆ ಓಡಿಹೋಗಿದ್ದಳು ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯ ಬೆನ್ನಲ್ಲಿ ಆಕೆಯನ್ನು ಕರೆದೊಯ್ದಿದ್ದ ಶಾರುಖ್ ಮತ್ತು ಆತನ ಮೂವರು ಸಹಚರರನ್ನು ಬಂಧಿಸಿ, ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಜೈಲಿಗೆ ಕಳುಹಿಸಿದ್ದರು. ಇದೀಗ ಮಹಿಳೆ ಮರಳಿ ತನ್ನ ಮನೆಗೆ ಬಂದಿದ್ದು ಪ್ರಕರಣ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.

ಇದೀಗ ಮಹಿಳೆ ಪೊಲೀಸ್ ಠಾಣೆಗೆ ಬಂದು ಹೇಳಿಕೆ ನೀಡಿದ್ದು, ತಾನು ಶಾರುಖ್ ಜತೆಗೆ ಓಡಿಹೋಗಿದ್ದು ನಿಜ. ಆದರೆ, ಆತ ನನ್ನನ್ನು ಕೆಲವೇ ದಿನಗಳಲ್ಲಿ ಮತ್ತೊಬ್ಬ ವ್ಯಕ್ತಿಗೆ 5 ಲಕ್ಷ ರು.ಗಳಿಗೆ ಮಾರಾಟ ಮಾಡಿಬಿಟ್ಟ. ಆತ ನನ್ನನ್ನು ಕೋಟಾದಲ್ಲಿಟ್ಟಿದ್ದು, ಅಲ್ಲಿಂದ ನಾನು ತಪ್ಪಿಸಿಕೊಳ್ಳಲು ಅನೇಕ ದಿನಗಳಿಂದ ಕಾಯುತ್ತಿದೆ. ಇದೀಗ ಅಲ್ಲಿಂದ ತಪ್ಪಿಸಿಕೊಂಡು ನನ್ನ ಕುಟುಂಬವನ್ನು ಅನೇಕರ ಸಹಾಯದಿಂದ ಪತ್ತೆ ಹಚ್ಚಿ ವಾಪಸ್ ಬಂದಿದ್ದೇನೆ ಎಂದು ಹೇಳಿಕೆ ನೀಡಿದ್ದಾಳೆ. ಮಹಿಳೆಯ ಆಗಮನದಿಂದ ಆಕೆಯ ಮಕ್ಕಳು ಮತ್ತು ಕುಟುಂಬಸ್ಥರು ಸಂತಸಗೊಂಡಿದ್ದಾರೆ.

ಇದೀಗ ಪೊಲೀಸರು, ಆಕೆಯ ಕೊಲೆಯ ಆರೋಪದಲ್ಲಿ ಜೈಲು ಸೇರಿರುವ ಆರೋಪಿಗಳ ಕುರಿತು ನ್ಯಾಯಾಲಯದ ತೀರ್ಮಾನವೇನು ಎಂಬ ಬಗ್ಗೆ ಪೊಲೀಸರು ಕಾಯುತ್ತಿದ್ದಾರೆ. ಮಹಿಳೆಯ ಹೇಳಿಕೆ ಮತ್ತು ಪೊಲೀಸರ ತನಿಖೆಯ ಆಧಾರದಲ್ಲಿ ನ್ಯಾಯಾಲಯ ಏನು ತೀರ್ಪು ನೀಡಲಿದೆ ಎಂಬುದರ ಆಧಾರದಲ್ಲಿ ಅವರ ಮೇಲಿನ ಕ್ರಮ ನಿರ್ಧಾರವಾಗಲಿದೆ. ಈ ಕುರಿತು ಮರು ತನಿಖೆ ನಡೆಸಲು ಥಾಂಡ್ಲಾ ಪೊಲೀಸರಿಗೆ ಸೂಚನೆ ನೀಡಿರುವುದಾಗಿ ಗಾಂಧಿ ಸಾಗರ್ ಪೊಲೀಸ್ ಠಾಣೆಯ ಉಸ್ತುವಾರಿ ತರುಣ್ ಭಾರದ್ವಾಜ್ ತಿಳಿಸಿದ್ದಾರೆ.


Share It

You cannot copy content of this page