ತುಮಕೂರು: 10 ವರ್ಷದಿಂದ ಬೆಳೆದಿದ್ದ 500 ಕ್ಕೂ ಹೆಚ್ಚು ಅಡಿಕೆ ಮರಗಳನ್ನು ರಾತ್ರೋರಾತ್ರಿ ನಾಶಗೊಳಿಸಿರುವ ಘಟನೆ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ನಡೆದಿದೆ.
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಬರಗೂರು ಗ್ರಾಮದ ರೈತ ಗಣೇಶ್ ಎಂಬುವವರು ಸುಮಾರು 500 ಕ್ಕೂ ಹೆಚ್ಚಿ ಅಡಕೆ ಮರಗಳನ್ನು ಬೆಳೆದಿದ್ದರು. ಇವೆಲ್ಲವನ್ನೂ ರಾತ್ರಿ ತೋಟಕ್ಕೆ ನುಗ್ಗಿದ ಕಿಡಿಗೇಡಿಗಳು ನಾಶಗೊಳಿಸಿದ್ದಾರೆ.
ತಡರಾತ್ರಿ ವೇಳೆ ತೋಟಕ್ಕೆ ನುಗ್ಗಿ ಮರಗಳನ್ನು ಕಡಿದು ಹಾಕಲಾಗಿದೆ. ಕಿಡಿಗೇಡಿಗಳ ಈ ಕೃತ್ಯಕ್ಕೆ ಸಾರ್ವಜನಿಕರು ಹಿಡಿಶಾಪ ಹಾಕಿದ್ದಾರೆ. ರೈತ ಗಣೇಶ್ 10 ವರ್ಷದಿಂದ ಬೆಳೆಸಿದ್ದ ಮರಗಳು ನಾಶವಾಗಿದ್ದಕ್ಕೆ ಕುಗ್ಗಿಹೋಗಿದ್ದಾರೆ. ಇದರಿಂದ ಲಕ್ಷಾಂತರ ರುಪಾಯಿ ಮೌಲ್ಯದ ಮರಗಳ ನಷ್ಟವಾಗಿದೆ.
ಪ್ರಕರಣದ ಸಂಬAಧ ಹಂದನಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕಿಡಿಗೇಡಿಗಳನ್ನು ಪತ್ತೆ ಹಚ್ಚುವಂತೆ ರೈತ ಗಣೇಶ್ ಮತ್ತು ರೈತ ಸಂಘಟನೆಗಳು ಮನವಿ ಮಾಡಿವೆ.
