ಮುಂಬಯಿ: 2020ರಲ್ಲಿ ಸಾವನ್ನಪ್ಪಿದ ದಿಶಾ ಸಾಲಿಯಾನ್ ಸಾವು ತ್ಮಹತ್ಯೆಯಲ್ಲ, ಆಕೆಯನ್ನು ಅತ್ಯಾಚಾರ ನಡೆಸಿ, ಕೊಲೆ ಮಾಡಲಾಗಿದೆ. ಹೀಗಾಗಿ, ಆದಿತ್ಯ ಠಾಕ್ರೆಯನ್ನು ಕಸ್ಟಡಿಯಲ್ಲಿ ವಿಚಾರಣೆ ನಡೆಸಿ ಎಂದು ಆಕೆಯ ಪೋಷಕರು ನ್ಯಾಯಾಲಯದ ಮೊರೆ ಹೋಗಲು ತೀರ್ಮಾನಿಸಿದ್ದಾರೆ.
ಅನುಮಾನಾಸ್ಪದ ಸಾವನ್ನಪ್ಪಿದ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸೆಲೆಬ್ರಿಟಿ ಪಿಆರ್ ಮ್ಯಾನೇಜರ್
ಆಗಿದ್ದ ದಿಶಾ ಸಾಲಿಯಾನ್ 2020ರಲ್ಲಿ ಮಲಾಡ್‌ನಲ್ಲಿರುವ ವಸತಿಕಟ್ಟಡದ 14 ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದರು. ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದು,
ಆದರೆ, ದಿನಾ ಸಾಲಿಯಾನ್ ಪೋಷಕರು ಆಕೆಯದ್ದು ಆಕಸ್ಮಿಕ ಸಾವಲ್ಲ, ಅವಳನ್ನು ಅತ್ಯಾಚಾರ ನಡೆಸಿ, ಕೊಲೆ ಮಾಡಲಾಗಿದೆ ಎಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಕೆಲವು ಪ್ರಭಾವಿಗಳ ರಕ್ಷಣೆಗಾಗಿ ಪೊಲೀಸರು ಆಕಸ್ಮಿಕ ಸಾವು ಎಂದು ವರದಿ ಮಾಡಿದ್ದಾರೆ ಎಂದು ಆಕೆಯ ತಂದೆ ಸತೀಶ್ ಸಾಲಿಯಾನ್ ಆರೋಪಿಸಿದ್ದಾರೆ.
ಸುಶಾಂತ್ ಸಿಂಗ್ ಪಿಆರ್ ಮ್ಯಾನೇಜರ್ ಆಗಿದ್ದ ದಿಶಾ, ಫೆ 2020ರಲ್ಲಿ ಸಾವನ್ನಪ್ಪಿದ್ದರು. ಆಕೆಯದ್ದು ಆಕಸ್ಮಿಕ ಸಾವು ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಅನಂತರ ಜೂನ್ 14 2020ರಂದು ಸುಶಾಂತ್ ಸಿಂಗ್ ಸಾವನ್ನಪ್ಪಿದ್ದು, ಅದನ್ನು ಪೊಲೀಸರು ಆತ್ಮಹತ್ಯೆ ಪ್ರಕರಣ ಎಂದು ದಾಖಲಿಸಿದ್ದಾರೆ. ಅವರ ಸಾವಿನ ಬಗ್ಗೆಯೂ ಆಗಾಗ ಚರ್ಚೆಯಾಗುತ್ತಿದ್ದು, ಇದೀಗ ದಿಶಾ ಸಾವಿನ ಕುರಿತು ಅನುಮಾನಗಳು ವ್ಯಕ್ತವಾಗುತ್ತಿವೆ.
ಗೃಹಖಾತೆ ರಾಜ್ಯ ಸಚಿವ ಪೋಷಕರು ತಮ್ಮ ಬಳಿಯಿರುವ ಯಾವುದೇ ದಾಖಲೆಗಳನ್ನು ಇಲಾಖೆಗೆ ನೀಡಬಹುದು. ಹೈಕೋರ್ಟ್ ನೀಡುವ ಯಾವುದೇ ನಿರ್ದೇಶನಗಳನ್ನು ನಾವು ಪಾಲಿಸುತ್ತೇವೆ ಎಂದು ಹೇಳಿದ್ದು, ಇದೀಗ ಪ್ರಕರಣ ಹೊಸ ರೂಪ ಪಡೆದುಕೊಳ್ಳುವ ಸಾಧ್ಯತೆಯಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.