ಅಪರಾಧ ಸುದ್ದಿ

ಊಟ ಕೊಡಲು ತಡ ಮಾಡಿದ್ದಕ್ಕೆ ಮಡದಿಯನ್ನೇ ಕೊಂದ 79 ವರ್ಷದ ವಯೋವೃದ್ಧ !

Share It

ಚೆನ್ನೈ: ಸಮಯಕ್ಕೆ ಸರಿಯಾಗಿ ಊಟ ಕೊಡದಿರುವುದು ಅನೇಕ ಸಲ ದಂಪತಿಗಳ ನಡುವಿನ ಕಲಹಕ್ಕೆ ದಾರಿ ಮಾಡಿಕೊಡುತ್ತದೆ. ಈಗಂತೂ ಆನ್‌ಲೈನ್ ಫುಡ್ ಮೊರೆಹೋಗುವ ಗಂಡAದಿರಿಗೆ ಪತ್ನಿಯರ ಕಿರಿಕಿರಿ ಮಾಮೂಲಿ. ಆದರೆ, ಇಂತಹ ಊಟ ತಡವಾದ ಕಾರಣವೇ ಮಡದಿಯ ಕೊಲೆಗೆ ಕಾರಣವಾಗಿರುವುದು ಮಾತ್ರ ದುರಂತವೇ ಸರಿ.

ತಿರುಮುಲ್ಲೆöÊವೊಯಲ್‌ನ ಕಮಲನಗರದ ವಿನಾಯಗಂ ಎಂಬ 79 ವರ್ಷದ ವ್ಯಕ್ತಿ ತನ್ನ ಪತ್ನಿ ಧನಲಕ್ಷ್ಮೀ ಎಂಬ 65 ವರ್ಷದ ಮಹಿಳೆಯನ್ನು ಊಟ ಕೊಡಲು ತಡ ಮಾಡಿದರು ಎಂಬ ಕಾರಣಕ್ಕೆ ಕೊಲೆ ಮಾಡಿದ್ದಾನೆ.

ಈ ದಂಪತಿಗೆ ಇಬ್ಬರು ಅವಿವಾಹಿತ ಮಕ್ಕಳಿದ್ದು, ವಿನಾಯಗಂ ಬಲಗಾಲನ್ನು ಮಧುಮೇಹದ ಕಾರಣಕ್ಕೆ ಕಳೆದುಕೊಂಡಿದ್ದರು. ಆದರೆ, ಪತ್ನಿ ತನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಆಗಾಗ ಪತ್ನಿ ಜಗಳ ಆಗುತ್ತಿತ್ತು.

`ಮಧುಮೇಹದ ಮಾತ್ರೆಗಳನ್ನ ತೆಗೆದುಕೊಳ್ಳುತ್ತಿದ್ದ ಕಾರಣಕ್ಕೆ ಸರಿಯಾದ ಸಮಯಕ್ಕೆ ಆಹಾರ ಕೊಡುವಂತೆ ಒತ್ತಾಯ ಮಾಡುತ್ತಿದ್ದ. ಆದರೆ, ಧನಲಕ್ಷ್ಮೀ ಕೂಡ ಅಸ್ವಸ್ಥಳಾದ ಕಾರಣದಿಂದ ಸಮಯಕ್ಕೆ ಸರಿಯಾಗಿ ಆಹಾರ ನೀಡಲು ಸಾಧ್ಯವಾಗುತ್ತಿರಲಿಲ್ಲ.

ಬುಧವಾರ ಸಂಜೆ ಇಬ್ಬರು ಪುತ್ರರು ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಸಮಯಕ್ಕೆ ಸರಿಯಾಗಿ ಆಹಾರ ನೀಡುವಂತೆ ಹೆಂಡತಿಗೆ ಕೇಳಿದ್ದ. ಆದರೆ, ಊಟ ಕೊಡದ ಕಾರಣಕ್ಕೆ ಪತ್ನಿಯೊಂದಿಗೆ ಜಗಳ ಆರಂಭಿಸಿದ್ದ. ಅಡುಗೆ ಮನೆಯಿಂದ ಚಾಕು ತೆಗೆದುಕೊಂಡು ಆಕೆಯ ಕುತ್ತಿಗೆಗೆ ಇರಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಮಡದಿ ಸಾವನ್ನಪ್ಪುತ್ತಿದ್ದಂತೆ ತಾನು ಕೂಡ ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನ ನಡೆಸಿದ್ದಾನೆ. ಸಂಜೆ ಮನೆಗೆ ಪುತ್ರರು ಬಂದು ನೋಡಿದಾಗ ತಾಯಿ ಸತ್ತು ಬಿದ್ದಿದ್ದು, ತಂದೆಯೂ ಕೂಡ ರಕ್ತದ ಮಡುವಿನಲ್ಲಿ ಬಿದ್ದಿದ್ದರು.

ತಂದೆಯನ್ನು ಏನಾಯಿತು ಎಂದು ಕೇಳಿದಾಗ ಏನೂ ಗೊತ್ತಿಲ್ಲದವರಂತೆ ನಟಿಸಿದರು. ಈ ವೇಳೆ ಪುತ್ರರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ವಿನಾಯಗಂ ಅವರನ್ನು ವಿಚಾರಣೆ ನಡೆಸಿದಾಗ ಆತ ತಾನು ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ ಎಂದು ಹೇಳಲಾಗಿದೆ.

ಧನಲಕ್ಷ್ಮೀಯ ಶವವನ್ನು ಸರಕಾರಿ ಕಿಲ್ಪಾಕ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದೆ. ಕುತ್ತಿಗೆಗೆ ಗಾಯಗಳಾಗಿರುವ ವಿನಾಯಗಂಗೆ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆತನ ಮೇಲೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ.


Share It

You cannot copy content of this page