ಸಿಎಂ ಕೈ ಸೇರಿದ ಬಿಜೆಪಿ ಕಾಲದ ಹಗರಣಗಳ ವರದಿ: ಸೇಡಿನ ರಾಜಕಾರಣಕ್ಕೆ ಮುನ್ನುಡಿಯಾಗುತ್ತಾ ರಾಜ್ಯಪಾಲರ ನಡೆ?

Share It

ಬೆಂಗಳೂರು: ಬಿಜೆಪಿ ಕಾಲದಲ್ಲಿ ನಡೆದಿರುವ ಕೋವಿಡ್ ಹಗರಣ ಸೇರಿದಂತೆ ಹಲವು ಬಿಜೆಪಿ ಕಾಲದ ಅವ್ಯವಹಾರದ ವರದಿ ಸಿಎಂ ಕೈಸೇರಿದ್ದು, ಸಿದ್ದರಾಮಯ್ಯ ವಿರುದ್ಧದ ಪ್ರಾಸಿಕ್ಯೂಷನ್ ಭವಿಷ್ಯದ ಮೇಲೆ ಬಿಜೆಪಿ ನಾಯಕರ ಭವಿಷ್ಯ ಅಡಗಿದೆಯಾ?

ಹೀಗೊಂದು ಅನುಮಾನ ಇದೀಗ ಶುರುವಾಗಿದೆ. ಸಿದ್ದರಾಮಯ್ಯ ವಿರುದ್ದ ಪ್ರಕರಣವನ್ನು ಬಿಜೆಪಿ ಜಠಿಲಗೊಳಿಸುತ್ತಿದ್ದಂತೆ, ಕಾಂಗ್ರೆಸ್ ಕೂಡ ಬಿಜೆಪಿ ಹಗರಣಗಳ ಬೆನ್ನುಬಿದ್ದಿದೆ. ಇದು ರಾಜ್ಯದಲ್ಲಿ ಸೇಡಿನ ರಾಜಕಾರಣಕ್ಕೆ ಮುನ್ನುಡಿ ಬರೆಯುವ ಎಲ್ಲ ಸಾಧ್ಯತೆ ಸೃಷ್ಟಿಸಿದೆ.

ಬಿಜೆಪಿ ಅವಧಿಯಲ್ಲಿ ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಕೋವಿಡ್ ಹಗರಣದ ಬಗ್ಗೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ನೇತೃತ್ವದ ವಿಚಾರಣಾ ಆಯೋಗ ತನ್ನ ಮಧ್ಯಂತರ ವರದಿಯನ್ನು ಸಿಎಂ ಸಿದ್ದರಾಮಯ್ಯನವರಿಗೆ ಶನಿವಾರ ಸಲ್ಲಿಸಿತು.‌

ಆಗಸ್ಟ್ 2023ರಲ್ಲಿ ರಾಜ್ಯ ಸರ್ಕಾರ ಕೋವಿಡ್ ಹಗರಣದ ತನಿಖೆ ನಡೆಸಲು ಜಾನ್ ಮೈಕಲ್ ಕುನ್ಹಾ ನೇತೃತ್ವದ ವಿಚಾರಣಾ ಆಯೋಗವನ್ನು ರಚಿಸಿತ್ತು. ಬಿಜೆಪಿ ಸರ್ಕಾರದ ಅವಧಿಯಲ್ಲಾಗಿರುವ ಕೋವಿಡ್ ನಿರ್ವಹಣೆ, ಔಷಧ, ಮಾಸ್ಕ್, ಉಪಕರಣ ಹಾಗೂ ಸಾಮಗ್ರಿ ಖರೀದಿ, ಆಮ್ಲಜನಕ ನಿರ್ವಹಣೆ, ಆಮ್ಲಜನಕ ಕೊರತೆಯಿಂದ ಉಂಟಾದ ಸಾವುಗಳ ಕುರಿತು ತನಿಖೆ ನಡೆಸಲು ಆಯೋಗವನ್ನು ರಚಿಸಲಾಗಿತ್ತು.

ಸಮಿತಿಗೆ 3 ತಿಂಗಳಲ್ಲಿ ವರದಿ ನೀಡುವಂತೆ ಸೂಚಿಸಲಾಗಿತ್ತು. ಬಳಿಕ ಈ ಅವಧಿಯನ್ನು ಮೇ 24, 2024ರವರೆಗೆ ವಿಸ್ತರಿಸಲಾಗಿದೆ. ಆದರೆ, ಆಯೋಗ ತನಿಖೆಗೆ ಮತ್ತಷ್ಟು ಕಾಲಾವಧಿಯನ್ನು ಕೋರಿದ ಹಿನ್ನೆಲೆಯಲ್ಲಿ ಅವಧಿಯನ್ನು ಆಗಸ್ಟ್‌ 31, 2024ರವರೆಗೆ ವಿಸ್ತರಿಸಲಾಗಿತ್ತು.

ವಿಚಾರಣಾ ಆಯೋಗ ಸಂಬಂಧಪಟ್ಟ ಇಲಾಖೆಗಳಿಂದ ಎರಡು ಲಕ್ಷಕ್ಕೂ ಅಧಿಕ ಕಡತಗಳನ್ನು ತರಿಸಿಕೊಂಡು ಪರಿಶೀಲಿಸಿದೆ. ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದಿಂದ ಟೆಂಡ‌ರ್, ವೈದ್ಯಕೀಯ ಉಪಕರಣ, ವೆಂಟಿಲೇಟರ್‌ಗಳ ಖರೀದಿ ಹಾಗೂ ಆಮ್ಲಜನಕ ನಿರ್ವಹಣೆ ಸಂಬಂಧಿತ ಕಡತಗಳನ್ನು ತರಿಸಿಕೊಂಡಿದೆ. ಸಂಬಂಧಿತ ಅಧಿಕಾರಿಗಳ ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಿದೆ.


Share It

You May Have Missed

You cannot copy content of this page