ಪ್ರಪಂಚದ ಅತ್ಯಂತ ಭೀಕರ ಯುದ್ದ ಯಾವುದು ಗೊತ್ತಾ? ಈ ಯುದ್ದದಲ್ಲಿ ಸತ್ತಿದ್ದು ಬರೋಬ್ಬರಿ 5 ಕೋಟಿ ನಾಗರಿಕರು

Share It

ಜಗತ್ತಿನಲ್ಲಿ ಹಲವಾರು ಯುದ್ಧಗಳು, ಸಂಘರ್ಷಗಳು ನಡೆದಿವೆ. ಪ್ರಾಚೀನ ಕಾಲದಿಂದ ಈವರೆಗೆ ಹೆಣ್ಣಿಗಾಗಿ, ಮಣ್ಣಿಗಾಗಿ, ಅಧಿಕಾರಕ್ಕಾಗಿ, ಸ್ವಾರ್ಥಕ್ಕಾಗಿ ಹೀಗೆ ಹತ್ತು ಹಲವು ಕಾರಣಗಳಿಗಾಗಿ ಯುದ್ಧಗಳು ನಡೆಯುತ್ತ ಬಂದಿವೆ. ಅವುಗಳ ಪೈಕಿ ವಿಶ್ವದ ಭೀಕರ ಯುದ್ಧಗಳು ಎಂದು ಗುರುತಿಸಿಕೊಂಡ ಪ್ರಮುಖ 12 ಯುದ್ಧಗಳು ಯಾವುವು ಎಂದು ಈ ಕೆಳಗಿನಂತೆ ನೋಡೋಣ ಬನ್ನಿ.

ಹನ್ನೆರಡನೇ ಸ್ಥಾನದಲ್ಲಿ ನಿಲ್ಲುವ ಯುದ್ಧವೆಂದರೆ ಕಂಗೋ ಯುದ್ದ. 1998 ರಿಂದ 2003 ರ ವರೆಗೆ ನಡೆದ ಈ ನಾಗರಿಕ ದಂಗೆಯಲ್ಲಿ ಪ್ರಾಣ ಕಳೆದುಕೊಂಡವರ ಸಂಖ್ಯೆ ಸುಮಾರು 54 ಲಕ್ಷ. ಈ ಯುದ್ಧದಲ್ಲಿ ಆಫ್ರಿಕದ 9 ದೇಶಗಳು ಹಾಗೂ 25 ಕ್ಕೂ ಹೆಚ್ಚು ಸಶಸ್ತ್ರ ಪಡೆಗಳು ಭಾಗವಹಿಸಿದ್ದವು. ಇದನ್ನ ಗ್ರೇಟ್ ವಾರ್ ಆಫ್ ಆಫ್ರಿಕಾ ಅಂತ ಕರೆಯಲಾಯಿತು.

1803 ರಿಂದ 1815 ರ ನಡುವೆ ನೆಪೋಲಿಯನ್ ಯುದ್ಧಗಳು ನಡೆದವು ಈ ಪಟ್ಟಿಯಲ್ಲಿ ಹನ್ನೊಂದನೇ ಸ್ಥಾನವನ್ನು ಈ ಯುದ್ದ ಪಡೆಯುತ್ತದೆ. ಈ ಅವಧಿಯಲ್ಲಿ ನಡೆದ ಸಣ್ಣ ಸಣ್ಣ ಯುದ್ಧಗಳನ್ನು ಒಟ್ಟುಗೂಡಿಸಿ ನೆಪೋಲಿಯನ್ ಯುದ್ಧಗಳು ಎಂದು ಕರೆಯಲಾಯಿತು. ಬ್ರಿಟನ್ ಮತ್ತು ಫ್ರಾನ್ಸ್ ನಡುವಿನ ಈ ಯುದ್ಧವು ಒಟ್ಟು 60 ಲಕ್ಷ ಮಂದಿಯನ್ನು ಬಲಿ ಪಡೆಯಿತು ಎಂದು ಹೇಳಲಾಗುತ್ತದೆ. ಈ ಯುದ್ಧವು ನೆಪೋಲಿಯನ್ ಮಹತ್ವಾಕಾಂಕ್ಷೆಯನ್ನು ಕೊಂದು ಹಾಕಿದ ಯುದ್ದ ಎಂತಲೂ ಕರೆಯಲಾಗುತ್ತದೆ.

ಹತ್ತನೆಯ ಭೀಕರ ಯುದ್ಧದ ಸಾಲಿಗೆ 30 ವರ್ಷಗಳ ಯುದ್ದ ಸೇರುತ್ತದೆ. ಈ ಯುದ್ಧವು 1618 ರಿಂದ 1648 ರ ವರೆಗೆ ನಡೆದ ಈ ಯುದ್ಧವು ಮತಗಳಿಗಾಗಿ ನಡೆದ ಬೃಹತ್ ಯುದ್ದವಾಗಿದೆ. ಕ್ಯಾಥೋಲಿಕ್ ಕ್ರೈಸ್ತರು ಮತ್ತು ಪ್ರಾಟೆಸ್ಟರ್ ಕ್ರೈಸ್ತರ ನಡುವೆ ಮಧ್ಯ ಯುರೋಪಿನಲ್ಲಿ ನಡೆದ ಈ ಕಲಹದಲ್ಲಿ 80 ಲಕ್ಷ ಜನರು ತಮ್ಮ ಪ್ರಾಣವನ್ನು ಕಳೆದುಕೊಂಡರು.

ಇದರ ಬಳಿಕ ಚೀನಾದಲ್ಲಿ ನಡೆದ ನಾಗರಿಕ ಯುದ್ದ ಭೀಕರ ಯುದ್ದ ಎನಿಸುತ್ತದೆ. ಹೆಚ್ಚು ನಾಗರಿಕರನ್ನು ಬಲಿ ತೆಗೆದುಕೊಂಡ ಯುದ್ದ ಎಂಬ ಕುಖ್ಯಾತಿ ಸಹ ಈ ಯುದ್ದಕ್ಕಿದೆ. 1927 ರಿಂದ 1950 ರ ವರೆಗೆ ನಡೆದ ಈ ಯುದ್ಧದಲ್ಲಿ 80 ಲಕ್ಷ ಜನರು ಸಾವಿಗೀಡಾದರು ಎಂದು ಇತಿಹಾಸ ಹೇಳುತ್ತದೆ.

ಇನ್ನೂ ಎಂಟನೆಯ ಸ್ಥಾನದಲ್ಲಿ 1917 ರಿಂದ 1922 ರ ನಡುವೆ ನಡೆದ ರಾಷ್ಯದ ಕ್ರಾಂತಿ ನಮ್ಮ ಕಣ್ಣಿಗೆ ಬೀಳುತ್ತದೆ. ಈ ಕ್ರಾಂತಿಯಲ್ಲಿ ಸುಮಾರು 90 ಲಕ್ಷ ಜನರು ಸಾವನ್ನಪ್ಪಿದ್ದರು. ಈ ಉದ್ದದ ಪರಿಣಾಮವಾಗಿ ರಾಜ್ಯಾಡಳಿತ ಕೊನೆಗೊಂಡು ಕಮ್ಯೂನಿಸ್ಟ್ ಅಸ್ತಿತ್ವಕ್ಕೆ ಬಂತು. ನಂತರ ಲೇನಿಲ್ ಅಧಿಕಾರ ಪಡೆದರು.

ಏಳನೆಯ ಸ್ಥಾನದಲ್ಲಿ ದಂಗನ್ ರಿವೋಲ್ಸ್ಟ್ ಯುದ್ದ ಕಣ್ಣಿಗೆ ಬೀಳುತ್ತದೆ. ಬರೋಬ್ಬರಿ 2 ಕೋಟಿ ಮಂದಿ ಈ ಯುದ್ಧದಿಂದ ಸಾವನ್ನಪ್ಪಿದ್ದರು. ಈ ಯುದ್ಧವು ಚೀನಾದ ಹಣ್ಣ್ ಜನಾಂಗ ಮತ್ತು ಸುನ್ನಿ ಮುಸ್ಲಿಂ ನಡುವೆ ನಡೆದ ನಾಗರಿಕ ಯುದ್ಧವಾಗಿತ್ತು.1862 ರಿಂದ 1877 ನಡುವೆ ನಡೆದ ಈ ಯುದ್ದ ಅತ್ಯಂತ ಭಯಾನಕ ಯುದ್ದ ಎನಿಸುತ್ತದೆ.

ಕ್ರಿ.ಶ 1756 ರಿಂದ ಕ್ರಿ.ಶ 1763 ರ ನಡುವೆ ಚೀನಾದಲ್ಲಿ ಮತ್ತೊಂದು ಯುದ್ದ ನಡೆದಿತ್ತು. 3 ಕೋಟಿ 60 ಲಕ್ಷ ಮಂದಿ ಸಾವಿಗೀಡಾಗಿದ್ದರು ಎಂದು ಇತಿಹಾಸ ಉಲ್ಲೇಖಿಸಿದೆ. ಇದನ್ನು ಲೂಷನ್ ಬಂಡಾಯ ಎಂದು ಕರೆಯಲಾಗಿದ್ದು, ಅಲ್ಲಿ ಸಾವನ್ನಪ್ಪಿದ ಜನರು ತಂಗ್ ಸಾಮ್ರಾಜ್ಯದ ಮೂರನೇ ಒಂದು ಭಾಗ ಎಂದು ಹೇಳಲಾಗಿದೆ.

ಮೊದಲನೇ ಮಹಾಯುದ್ಧ ಐದನೆಯ ಭೀಕರ ಯುದ್ಧವಾಗಿದೆ. ಇದು 1914 ರಿಂದ 1918 ರವರೆಗೆ ನಡೆದ ಯುದ್ದವಾಗಿದ್ದು ಆಟೋಮಾನ್ ಸಾಮ್ರಾಜ್ಯದ ಅಂತ್ಯಕ್ಕೆ ಈ ಯುದ್ದ ಕಾರಣವಾಯಿತು. ಒಟ್ಟು 1ಕೋಟಿ 80 ಲಕ್ಷ ಜನರು ಸಾವಿಗೀಡಾದರು. ಸೆಂಟ್ರಲ್ ಗ್ರೂಪ್ ಮತ್ತು ಅಲೆಯನ್ಸ್ ಗ್ರೂಪ್ ಗಳ ನಡುವೆ ಯುದ್ದ ನಡೆಯಿತು. ಈ ಯುದ್ಧದಿಂದ ಹಲವಾರು ಸಣ್ಣ ಪುಟ್ಟ ರಾಜ್ಯಗಳು ಜನ್ಮತಾಳಿದವು.

ಚೀನಾದ ಥೈಪಿಂಗ್ ಕ್ರಾಂತಿ 1850 ರಿಂದ 1865 ರ ನಡುವೆ ನಡೆದ ಈ ಯುದ್ಧದಲ್ಲಿ ಕಿಂಗ್ ಸಾಮ್ರಾಜ್ಯ ಮತ್ತು ಕ್ರಿಶ್ಚಿಯನ್ನರು ಈ ಸಂಘರ್ಷದಲ್ಲಿ ಭಾಗಿಯಾಗುತ್ತಾರೆ. ಇದರ ಪರಿಣಾಮ 3 ಕೋಟಿ ಮಂದಿ ಸಾವನ್ನಪ್ಪಿದ್ದರು ಎಂದು ಉಲ್ಲೇಖಿಸಲಾಗಿದೆ.

ಮೂರನೆಯ ಭೀಕರ ಯುದ್ದ ಸಹ ಚೀನಾದ ಕಿಂಗ್ ಮತ್ತು ಮಿಂಗ್ ಸಾಮ್ರಾಜ್ಯದ ನಡುವೆ ನಡೆದ ಯುದ್ದವಾಗಿದೆ. 1618 ರಿಂದ 1683 ರ ನಡುವೆ ನಡೆದ ಯುದ್ಧದಲ್ಲಿ 3 ಕೋಟಿಗೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡರು.

1937 ರಿಂದ 1945 ರ ವರೆಗೆ ನಡೆದ ಚಿನೋ ಜಪಾನ್ ಯುದ್ದಲ್ಲಿ 4 ಕೋಟಿಗೂ ಅಧಿಕ ಮಂದಿ ಸಾವಿಗೀಡಾದರು. ಅದರಲ್ಲಿ 3 ಕೋಟಿಯಷ್ಟು ಚೀನಾ ನಾಗರಿಕರೇ ಆಗಿದ್ದರು ಎಂಬುದು ವಿಪರ್ಯಾಸ.

ಮೊದಲನೇ ಸ್ಥಾನದಲ್ಲಿ ಎರಡನೇ ಮಹಾಯುದ್ಧ ನಿಲ್ಲುತ್ತದೆ. ಮೊದಲ ಅಣು ಬಾಂಬ್ ದಾಳಿಗೆ ಈ ಯುದ್ಧ ಸಾಕ್ಷಿಯಾಯಿತು. 7 ಕೋಟಿಗೂ ಅಧಿಕ ಮಂದಿ ಸಾವನ್ನಪ್ಪಿದರು. ಅದರಲ್ಲಿ 5 ಕೋಟಿ ನಾಗರಿಕರು ಮತ್ತು 2 ಕೋಟಿ ಸೈನಿಕರು ಪ್ರಾಣ ಕಳೆದುಕೊಂಡಿದ್ದರು. ಅನಂತರ ಇದು ಶೀತಲ ಸಮರಕ್ಕೆ ನಾಂದಿಯಾಯಿತು. ಅಮೆರಿಕ ಮತ್ತು ರಷ್ಯಗಳು ವಿಶ್ವ ಶಕ್ತಿಗಳಾಗಿ ಗುರುತಿಸಿಕೊಂಡವು. ಈ ಯುದ್ಧವು ಈವರೆಗೆ ನಡೆದ ಭೀಕರ ಯುದ್ದ ಎಂಬ ಕುಖ್ಯಾತಿಗೆ ಪಾತ್ರವಾಗಿದೆ.


Share It

You May Have Missed

You cannot copy content of this page