ಮನೆಯೊಂದರಲ್ಲಿ ಮೂವರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ: ಕೊಲೆಯ ಶಂಕೆ
ಪಾಲ್ಘರ್ (ಮಹಾರಾಷ್ಟ್ರ): ಒಂದೇ ಕುಟುಂಬದ ಮೂವರು ವ್ಯಕ್ತಿಗಳ ಶವ ಮನೆಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೊಲೆ ಎಂದು ಶಂಕಿಸಲಾಗಿದೆ. ಪಾಲ್ಘರ್ ಜಿಲ್ಲೆಯ ವಾಡ ತಾಲೂಕಿನ ನೆಹರೋಲಿ ಗ್ರಾಮದಲ್ಲಿ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಮೂವರನ್ನು ಕೊಂದಿರುವ ಹಂತಕರು ಮನೆಗೆ ಹೊರಗಿನಿಂದ ಬೀಗ ಹಾಕಿರಬಹುದು ಎಂದು ಹೇಳಲಾಗುತ್ತಿದೆ.
ಮುಕುಂದ್ ಬೇಚಾರ್ದಾಸ್ ರಾಥೋಡ್, ಕಾಂಚನ್ ಮುಕುಂದ್ ರಾಥೋಡ್ ಮತ್ತು ಸಂಗೀತಾ ಮುಕುಂದ್ ಮೃತಪಟ್ಟವರು ಎಂದು ಹೇಳಲಾಗುತ್ತಿದೆ. ಹಂತಕರು ಮೂವರನ್ನು ಕೊಂದ ಕಾರಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ರಾಥೋಡ್ ಕುಟುಂಬ ಮೂಲತಃ ಗುಜರಾತಿನವರಾಗಿದ್ದು, ಕಳೆದ ೨೦ ವರ್ಷಗಳಿಂದ ನೆಹ್ರೋಲಿಯಲ್ಲಿ ನೆಲೆಸಿದ್ದರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಒಬ್ಬ ಮಗ ವಸಾಯಿಯಲ್ಲಿ ವಾಸಿಸುತ್ತಿದ್ದರೆ, ಇನ್ನೊಬ್ಬ ಗುಜರಾತ್‌ನ ರಾಜ್‌ಕೋಟ್‌ನಲ್ಲಿದ್ದಾನೆ ಎನ್ನಲಾಗಿದೆ.
ಆಗಸ್ಟ್ ೧೮ರಿಂದ ಮೃತಪಟ್ಟವರು ಕುಟುಂಬಸ್ಥರ ಸಂಪರ್ಕಕ್ಕೆ ಸಿಕ್ಕಿರಲಿಲ್ಲ, ರಾಜ್‌ಕೋಟ್‌ನಲ್ಲಿ ಫ್ಯಾಬ್ರಿಕೇಶನ್ ವ್ಯವಹಾರ ನಡೆಸುತ್ತಿರುವ ಸುಹಾಸ್ ರಾಥೋಡ್ ಕರೆ ಮಾಡಿದರೂ, ಸ್ವೀಕರಿಸಿದ ಕಾರಣ ಅನುಮಾನ ಬಂದು ಕುಟುಂಬಸ್ಥರು ನೆಹ್ರೋಲಿಗೆ ಬಂದಿದ್ದಾರೆ. ಮನೆಗೆ ಬೀಗ ಹಾಕಲಾಗಿತ್ತಾದರೂ, ಬೀಗ ಒಡೆದು ನೋಡಿದಾಗ, ಮುಚ್ಚಿದ ಪೆಟ್ಟಿಗೆಯಲ್ಲಿ ಇಬ್ಬರ ಮೃತದೇಹಗಳು ಪತ್ತೆಯಾದರೆ, ಇನ್ನೊಬ್ಬರ ಶವ ಸ್ನಾನಗೃಹದಲ್ಲಿ ಕಂಡುಬAದಿದೆ. ಮೃತಪಟ್ಟು ೧೨ ದಿನಗಳಾದ ಕಾರಣ, ದೇಹಗಳು ಕೊಳೆತ ಸ್ಥಿತಿಯಲ್ಲಿದ್ದವು.
ವಾಡಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಘಟನೆ ನಡೆದು ಹಲವು ದಿನಗಳಾಗಿವೆ. ಮೃತದೇಹದಿಂದ ದುರ್ವಾಸನೆ ಬರುತ್ತಿದೆ. ಇದೊಂದು ತ್ರಿವಳಿ ಕೊಲೆ ಎಂಬ ಬಗ್ಗೆ ಅನುಮಾನಿಸಿದ್ದಾರೆ. ನೆಹ್ರೋಲಿಯ ಸುತ್ತಮುತ್ತಲಿನ ಎಲ್ಲಾ ಆಸ್ಪತ್ರೆಗಳಲ್ಲಿ ಪರಿಶೀಲಿಸಿದಾಗ ಕುಟುಂಬಕ್ಕೆ ಯಾವುದೇ ಅನಾರೋಗ್ಯ ಸಮಸ್ಯೆ ಇರಲಿಲ್ಲ ಎಂದು ತಿಳಿದುಬಂದಿದೆ. ಈ ಬಗ್ಗೆ ತನಿಖೆ ಮುಂದುವರಿದಿದೆ.


