ದರ್ಶನ್ ಏನ್ ರೋಲ್ ಮಾಡೆಲ್ಲೇನ್ರಿ, ಯಾವಾಗ್ಲೂ ಅವನನ್ನೇ ತೋರಿಸ್ತೀರಲ್ಲ?
ತುಮಕೂರು: ದರ್ಶನ್ ಏನ್ ರೋಲ್ ಮಾಡೆಲ್ ಏನ್ರೀ, ಅವನೇನ್ ಸಾಧನೆ ಮಾಡಿದ್ದಾನೆ ಅಂತ ಅವನನ್ನೇ ತೋರಿಸ್ತೀರಿ, ಬೇರೆ ಏನೂ ಇಲ್ವಾ? ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಮಾಧ್ಯಮಗಳನ್ನು ಪ್ರಶ್ನಿಸಿದ್ದಾರೆ.
ನಟ ದರ್ಶನ್ ಗೆ ಐಷಾರಾಮಿ ಸೌಲಭ್ಯಗಳನ್ನು ನೀಡಿದ ಪ್ರಕರಣದ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಗರಂ ಆದ ಕೆ.ಎನ್.ರಾಜಣ್ಣ, ದರ್ಶನ್ ಅದೇನ್ ದೊಡ್ಡ ಕೆಲಸ ಮಾಡಿದ್ದಾರೆ ಅಂತ ತೋರಿಸ್ತೀರಿ, ಬೇರೆ ಏನಾದ್ರೂ ಒಳ್ಳೇದ್ ತೋರಿಸಿ, ಅದು ಬಿಟ್ಟು ದಿನಬೆಳಗಾದ್ರೆ ದರ್ಶನ್ ದರ್ಶನ್ ಅಂತೀರಾ ಎಂದು ಸಿಟ್ಟಾದರು.
ನಟ ದರ್ಶನ್ ತೆರೆ ಮೇಲೆ ಹೀರೋ ಆಗಿ ಅನೇಕ ಒಳ್ಳೆಯ ಕೆಲಸ ಮಾಡಿದ್ದಾರೆ. ಇದನ್ನು ನಾವು ಒಪ್ಪಲೇಬೇಕು. ಆದರೆ, ಹಾಗಂತ ನಿಜಜೀವನದಲ್ಲಿ ಇಂತಹ ಕೆಲಸ ಮಾಡಿದ್ರೆ ಸುಮ್ನಿರಕ್ಕಾಯ್ತದಾ? ಕಾನೂನು ಅದರ ಕೆಲಸ ಅದು ಮಾಡುತ್ತದೆ ಎಂದು ತಿಳಿಸಿದ್ದಾರೆ.
ದರ್ಶನ್ ಗೆ ಜೈಲಿನಲ್ಲಿ ರಾಜಾತಿಥ್ಯ ನೀಡಿರುವ ವರದಿ ಸರಕಾರಕ್ಕೆ ಮುಜುಗರ ತರಿಸಿದೆ. ಇದೇ ಕಾರಣಕ್ಕೆ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಪ್ರತಿನಿಧಿಗಳು ಪ್ರಶ್ನೆ ಮಾಡಿದಾಗ ರಾಜಣ್ಣ ಗರಂ ಆಗಿದ್ದಾರೆ.


