ನಿಯಂತ್ರಣ ತಪ್ಪಿ ಮನೆ ಮೇಲೆ ನುಗ್ಗಿದ ಲಾರಿ:ಅಪಾಯದಿಂದ ಪಾರಾದ ಕುಟುಂಬ

Share It

ದಾವಣಗೆರೆ: ಚಲಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಎರಡು ಮನೆಗೆ ನುಗ್ಗಿರುವ ಘಟನೆ ದಾವಣಗೆರೆ ತಾಲೂಕಿನ ಕುರ್ಕಿ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ. ಕುರ್ಕಿ ಗ್ರಾಮದ ರಾಮಣ್ಣ ಹಾಗೂ ಜಯಪ್ಪ ಎಂಬವರಿಗೆ ಸೇರಿದ ಮನೆಗೆ ಹಾನಿಯಾಗಿದೆ.

ಚನ್ನಗಿರಿ ಕಡೆಯಿಂದ ದಾವಣಗೆರೆ ಕಡೆ ಚಲಿಸುತ್ತಿದ್ದ ಲಾರಿ ಅತಿವೇಗವಾಗಿ ಆಗಮಿಸಿ ಮನೆಗೆ ಅಪ್ಪಳಿಸಿದೆ. ಮನೆಯಲ್ಲಿ ರಾಮಣ್ಣ ಅವರ ಕುಟುಂಬವಿದ್ದರೂ ಯಾವುದೇ ಪ್ರಾಣ ಹಾನಿಯಾಗಿಲ್ಲ. ಚಾಲಕನಿಗೆ ಚಿಕ್ಕಪುಟ್ಟ ಗಾಯಗಳಾಗಿದ್ದು, ದುರಂತ ತಪ್ಪಿದೆ. ಹದಡಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ದಾವಣಗೆರೆಯಿಂದ ಚನ್ನಗಿರಿ, ಬಿರೂರು, ಸಮ್ಮಸಂಗಿ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಅವೈಜ್ಞಾನಿಕವಾಗಿದ್ದರಿಂದ ಇಂಥ ಘಟನೆಗಳು ನಡೆಯುತ್ತಿವೆ. ರಸ್ತೆ ಸರಿಪಡಿಸುವಂತೆ ಹಲವು ಬಾರಿ ಅಂದಿನ ಸಂಸದರಾಗಿದ್ದ ಜಿ.ಎಂ‌.ಸಿದ್ದೇಶ್ವರ್ ಅವರಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಕುರ್ಕಿ ಗ್ರಾಮಸ್ಥರ ಆರೋಪಿಸಿದ್ದಾರೆ.

ಗ್ರಾಮಸ್ಥ ರೇವಣಸಿದ್ದಪ್ಪ ಮಾತನಾಡಿ, “ರಸ್ತೆ ಮಾಡುವ ವೇಳೆಯೇ ಇಂಜಿನಿಯರ್​ಗಳು ವೈಜ್ಞಾನಿಕವಾಗಿ ಮಾಡಬೇಕಿತ್ತು. ಆದರೆ ಈಗ ಅನಾಹುತ ಸಂಭವಿಸುತ್ತಿವೆ. ರಾತ್ರಿ ಲಾರಿ ಎರಡು ಮನೆಗೆ ನುಗ್ಗಿದ್ದು ಎರಡು ಕುಟುಂಬಗಳು ಸರ್ವನಾಶ ಆಗ್ಬೇಕಿತ್ತು. ಅದೃಷ್ಟವಶಾತ್ ಭಾರೀ ದುರಂತ ತಪ್ಪಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.


Share It

You May Have Missed

You cannot copy content of this page