ಸಿದ್ದರಾಮಯ್ಯ ಒಪ್ಪಿಕೊಂಡ್ರೆ ಸಿಎಂ ಆಗ್ತೀನಿ: ಆರ್.ವಿ. ದೇಶಪಾಂಡೆ ಹೊಸ ಬಾಂಬ್
ಬೆAಗಳೂರು: ನನಗೆ ಸಚಿವನಾಗಿ ಕೆಲಸ ಮಾಡಿ ಸಾಕಾಗಿದೆ, ಇನ್ಮುಂದೆ ಏನಾದ್ರೂ ಅವಕಾಶ ಸಿಕ್ರೆ ಸಿಎಂ ಆಗಬೇಕಷ್ಟೇ. ಸಿದ್ರಾಮಯ್ಯ ಅನುಮತಿ ಕೊಟ್ರೆ ಸಿಎಂ ಆಗ್ತೀನಿ ಎಂದು ಹಿರಿಯ ಸಚಿವ ಆರ್.ವಿ. ದೇಶಪಾಂಡೆ ತಿಳಿಸಿದ್ದಾರೆ
ಸುದ್ದಿಗಾರರ ಜತೆಗೆ ಮಾತನಾಡಿ, ತಮ್ಮ ಮನದಿಂಗಿತ ವ್ಯಕ್ತಪಡಿಸಿರುವ ಅವರು, ಸಚಿವನಾಗಿ ಕೆಲಸ ಮಾಡಿ ಸಾಕಾಗಿದೆ. ಈಗ ಸಚಿವನಾಗ್ತೇನೆ ಎಂದು ಹೇಳಲು ಸಾಧ್ಯವಿಲ್ಲ. ನನಗೂ ಸಚಿವ ಸ್ಥಾನದ ಮೇಲೆ ಯಾವುದೇ ಆಸಕ್ತಿಯಿಲ್ಲ, ಅವಕಾಶ ಸಿಕ್ಕರೆ ನಾನು ಸಿಎಂ ಆಗಬಹುದು ಎಂದು ಹೇಳಿದ್ದಾರೆ.
ಆದರೆ, ಇದೀಗ ಸಿಎಂ ಸ್ಥಾನ ಖಾಲಿಯಿಲ್ಲ, ಸಧ್ಯಕ್ಕೆ ಸಿಎಂ ಬದಲಾವಣೆ ಮಾಡುವ ಯಾವುದೇ ನಿರ್ಧಾರವನ್ನು ಹೈಕಮಾಂಡ್ ಮಾಡಿಲ್ಲ. ಹೈಕಮಾಂಡ್ ನಿರ್ಧಾರ ಮಾಡಿದರೂ, ಸಿದ್ದರಾಮಯ್ಯ ಒಪ್ಪಬೇಕಲ್ಲ, ಸಿದ್ದರಾಮಯ್ಯ ಒಪ್ಪಿಕೊಂಡ್ರೆ ನಾನ್ ಸಿಎಂ ಆಗೋಕೆ ರೆಡಿಯಿದ್ದೇನೆ ಎಂದು ತಿಳಿಸಿದ್ದಾರೆ.


