ಹುಬ್ಬಳ್ಳಿ: ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದ 23 ಜನರ ಬಂಧನ

Share It

ಹುಬ್ಬಳ್ಳಿ: ಮೀಟರ್ ಬಡ್ಡಿ ದಂಧೆ ನಡೆಸುತ್ತ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದ 23 ಜನರನ್ನು ಬಂಧಿಸಿರುವ ಪೊಲೀಸರು 16 ಪ್ರಕರಣಗಳನ್ನು ದಾಖಲು ಮಾಡಿದ್ದಾರೆ.

ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ವಿವಿಧ ಠಾಣೆಗಳಲ್ಲಿ ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದ 23 ಜನರನ್ನು ಬಂಧಿಸಿ, 16 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಹು-ಧಾ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ. ಶಶಿಕುಮಾರ್ ಅವರು ಹುಬ್ಬಳ್ಳಿ ಆಯುಕ್ತರಾಗಿ ಬಂದ ನಂತರ ಜನಸ್ನೇಹಿಯಾಗಿ ವರ್ತಿಸುತ್ತಿರುವ ಕಾರಣಕ್ಕೆ ಅವರಿಗೆ ನೇರವಾಗಿ ದೂರುಗಳು ಬರುತ್ತಿವೆ. ಈ ಹಿನ್ನೆಲೆಯಲ್ಲಿ ಅವರು ಕಾರ್ಯಾಚರಣೆಗಿಳಿಸಿ, ಬಡ್ಡಿ ದಂಧೆಕೋರರನ್ನು ಹೆಡೆಮುರಿಕಟ್ಟಿದ್ದಾರೆ.

ಹುಬ್ಬಳ್ಳಿ ಉಪನಗರ ಠಾಣೆ ವ್ಯಾಪ್ತಿಯಲ್ಲಿ ನಾಲ್ವರು ಆರೋಪಿಗಳಾದ ರಾಜೇಶ್ ಮೆಹರವಾಡೆ, ಮೋಹಿತ್ ಮೆಹರವಾಡೆ, ಅನಿತಾ ಹಬೀಬ್, ದೀಪಾ ಶೆಲವಡಿ ಇವರ ಮೇಲೆ ತಲಾ 2 ಪ್ರಕರಣ, ಅಶೋಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸತೀಶ್ ದೊಡ್ಡಮನಿ ವಿರುದ್ಧ 1 ಪ್ರಕರಣ, ಕಮರಿಪೇಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಧನಲಕ್ಷ್ಮೀ ಮದ್ರಾಸಿ, ಗೋಕುಲ್ ರೋಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಲೋಮನ್ ಬಬ್ಬಾ, ಆನಂದ ರಾಯಚೂರು ವಿರುದ್ಧ ತಲಾ 1 ಪ್ರಕರಣ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ನವೀನ್ ಭಾಂಡಗೆ, ದತ್ತು ಪಟ್ಟನ್ ವಿರುದ್ಧ 2 ಪ್ರಕರಣ, ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಸ್ಟೀಫನ್ ಕ್ಷೀರಸಾಗರ ವಿರುದ್ಧ 1 ಪ್ರಕರಣ ದಾಖಲಾಗಿದೆ.

ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಸಮೀರ್, ಸೈಯದಲಿ, ಬಿ.ಕೆ. ಬಾಯಿ, ಹ್ಯಾರಿಶ್ ಪಠಾಣ ವಿರುದ್ಧ 2 ಪ್ರಕರಣ, ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಜಾವೇದ್ ಘೋಡೆಸವಾರ ವಿರುದ್ಧ 1 ಪ್ರಕರಣ, ಧಾರವಾಡ ಶಹರ್ ಪೊಲೀಸ್ ಠಾಣೆಯಲ್ಲಿ ಶಾಕೀರ ಕರಡಿಗುಡ್ಡ ವಿರುದ್ಧ 1 ಪ್ರಕರಣ, ಹುಬ್ಬಳ್ಳಿ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಗಿರಿಯಪ್ಪ ಬಳ್ಳಾರಿ, ಬಾಲು ಬಳ್ಳಾರಿ, ಅಭಿಲೇಖಾ ತೋಖಾ ವಿರುದ್ಧ 1 ಪ್ರಕರಣ, ಕಸಬಾ ಪೊಲೀಸ್ ಠಾಣೆಯಲ್ಲಿ ತನ್ವೀರ್ ಜಂಗ್ಲಿವಾಲೆ ವಿರುದ್ಧ 1 ಪ್ರಕರಣ, ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ನಾರಾಯಣ ಕಾಟಗಾರ ವಿರುದ್ಧ 1 ಪ್ರಕರಣ ದಾಖಲಾಗಿದೆ.

ಆರೋಪಿತರಿಂದ ಅಂದಾಜು ನಾಲ್ಕು ಲಕ್ಷ ರೂ. ಮೌಲ್ಯದ ಬೆಳ್ಳಿ ಚೈನ್, ಬೈಕ್‌ಗಳು, ಖಾಲಿ ಚೆಕ್‌ಗಳು, ಬಾಂಡ್ ಪೇಪರ್, ಮೊಬೈಲ್ ಫೋನ್‌ಗಳು, ವಾಹನದ ಮೂಲ ದಾಖಲಾತಿಗಳು ಸೇರಿ ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಶಶಿಕುಮಾರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಡಿಸಿಪಿಗಳಾದ ಮಹಾನಿಂಗ ನಂದಗಾವಿ, ರವೀಶ್ ಸಿ.ಆರ್., ಎಸಿಪಿಗಳಾದ ಶಿವಪ್ರಕಾಶ್ ನಾಯಕ್, ಉಮೇಶ್ ಚಿಕ್ಕಮಠ ಹಾಗೂ ವಿವಿಧ ಠಾಣೆಗಳ ಸಿಪಿಐ ಸಿಬ್ಬಂದಿ ಇದ್ದರು.


Share It

You May Have Missed

You cannot copy content of this page