ಬೆಳ್ಳಗಿರೋದೆಲ್ಲ ಹಾಲಲ್ಲ, ಕಪ್ಪಗಿರೋ ಹಾಲು ಇರುತ್ತೆ ಅಂದ್ರೆ ನೀವ್ ನಂಬಲ್ಲ !
ಕಪ್ಪು ಬಣ್ಣದ ಹಾಲನ್ನು ನೀವು ನೋಡಿದ್ದೀರ?? ಅಷ್ಟಕ್ಕೂ ಆ ಪ್ರಾಣಿ ಯಾವುದು ಗೊತ್ತ!!
ನಮ್ಮಲ್ಲಿ ಆಕಳು ಕಪ್ಪಾದರೆ ಹಾಲು ಕಪ್ಪೆ ಎಂಬ ಮಾತಿದೆ. ಆದ್ರೆ ಈ ಮಾತು ಸತ್ಯ ಕೂಡ. ಮಗುವೊಂದು ಹುಟ್ಟಿದ ತಕ್ಷಣ ತಾಯಿಯ ಎದೆ ಹಾಲನ್ನು ಸವಿಯಲು ಬಯಸುತ್ತದೆ. ಹಾಲು ಎಂದಾಕ್ಷಣ ನೆನಪಿಗೆ ಬರುವುದು ಹಸುವಿನ ಅಥವಾ ಎಮ್ಮೆಯ ಹಾಲು. ಹಾಲು ಅತ್ಯಂತ ಪೋಷಕಾಂಶ ಭರಿತ ಆಹಾರವಾಗಿದೆ. ಸಾಮಾನ್ಯವಾಗಿ ಹಾಲು ಬಿಳಿ ಬಣ್ಣದಿಂದ ಕೂಡಿರುತ್ತದೆ ಅಲ್ಲವೇ. ಇಲ್ಲೊಂದು ಪ್ರಾಣಿಯ ಹಾಲು ಕಪ್ಪು ಬಣ್ಣದಿಂದ ಕೂಡಿದೆ. ಆಗಿದ್ರೆ ಬನ್ನಿ ಆ ಪ್ರಾಣಿ ಯಾವುದು ಏನು ಕತೆ ತಿಳಿಯೋಣ.
ಮನುಷ್ಯನನ್ನು ಒಳಗೊಂಡಂತೆ ವಿಶ್ವದ ಹೆಚ್ಚು ಪ್ರಾಣಿಗಳು ತಾಯಿಯ ಎದೆ ಹಾಲನ್ನು ಕುಡಿಯುತ್ತವೆ. ಆ ಬಳಿಕವಷ್ಟೇ ಅವುಗಳು ಬೇರೆ ಆಹಾರವನ್ನು ಸೇವಿಸುವುದು. ತಾಯಿಯ ಎದೆಹಾಲು ಅಷ್ಟು ಮಹತ್ವವನ್ನು ಹೊಂದಿದೆ ಎಂಬುದನ್ನು ನೀವು ನಂಬಲೇ ಬೇಕು.
ನಮ್ಮ ಈ ಪ್ರಪಂಚದಲ್ಲಿ ಸರಿ ಸುಮಾರು 6400 ಸಸ್ತನಿಗಳಿವೆ. ಆ ಪೈಕಿ ಕೇವಲ ಒಂದೇ ಒಂದು ಪ್ರಾಣಿಯ ಎದೆಹಾಲು ಕಪ್ಪು ಬಣ್ಣದ್ದಾಗಿರುತ್ತದೆ. ಈವರೆಗೆ ನೀವು ಎಂದಿಗೂ ಕಪ್ಪಗಿನ ಹಾಲನ್ನು ನೋಡಿರಲು ಸಾದ್ಯವಿಲ್ಲ.
ಹೌದು ಘೇಂಡಾಮೃಗಳು ಕಪ್ಪು ಬಣ್ಣದ ಹಾಲನ್ನು ಉತ್ಪಾದಿಸುತ್ತವೆ. ಆಫ್ರಿಕದ ಕಪ್ಪು ಘೇಂಡಾಮೃಗ ಎಂದೇ ಇವುಗಳನ್ನು ಕರೆಯಲಾಗುತ್ತದೆ. ಇವುಗಳ ಹಾಲಿನಲ್ಲಿ ಶೇಕಡಾ 0.02 ರಷ್ಟು ಮಾತ್ರ ಕೊಬ್ಬಿನ ಅಂಶ ಇರುತ್ತದೆ. ಉಳಿದ ಭಾಗ ನೀರು ಮತ್ತು ಕಪ್ಪು ಬಣ್ಣದಿಂದ ಕೂಡಿರುತ್ತದೆ.
ಇವುಗಳ ವಿಶೇಷವೆಂದರೆ ಈ ಪ್ರಾಣಿಗಳು 4 ರಿಂದ 5 ವರ್ಷಗಳ ಅವಧಿಯಲ್ಲಿ ಗರ್ಭವನ್ನು ಧರಿಸಿತ್ತವೆ. ಇವುಗಳು ಒಂದು ವರ್ಷಕ್ಕಿಂತಲೂ ಹೆಚ್ಚು ಕಾಲ ಗರ್ಭಧರಿಸಿರುತ್ತವೆ. ಒಮ್ಮೆಗೆ ಒಂದೇ ಮರಿಗೆ ಜನ್ಮ ನೀಡುವ ಜೀವನ ಶೈಲಿ ಇವುಗಳದ್ದು.


