ಐಪಿಎಲ್ 2025ರ ಮೆಗಾ ಹರಾಜಿಗೆ ಈಗಾಗಲೇ ಎಲ್ಲಾ ಸಿದ್ಧತೆಗಳು ನೆಡೆದಿದ್ದು. ಇಂಡಿಯನ್ ಪ್ರೀಮಿಯಾರ್ ಲೀಗ್ ನ(ಐಪಿಎಲ್ )ಎಲ್ಲಾ ಹತ್ತು ತಂಡಗಳೂ ಕೂಡ ರೀಟೆಂಷನ್ ಆಟಗಾರರನ್ನು ಪ್ರಕಟಣೆ ಮಾಡುವುದೊಂದೇ ಬಾಕಿ ಉಳಿದಿರುವುದು .
ಆದ್ದರಿಂದ ಈಗ ದೊರೆತಿರುವ ಕೆಲವು ಮಾಹಿತಿಗಳ ಪ್ರಕಾರ ಶೀಘ್ರದಲ್ಲೆ ಎಲ್ಲಾ ಐಪಿಎಲ್ ತಂಡಗಳೂ ಸಹ ತಮ್ಮ ತಮ್ಮ ರೀಟೈನ್ ಆಟಗಾರರನ್ನು ಪ್ರಕಟಿಸಲಿವೆ. ಹಾಗಾಗಿ ಕಳೆದ ಆವೃತ್ತಿಯ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿ ಪಾಯಿಂಟ್ಸ್ ಟೇಬಲ್ ಟಾಪ್ ನಲ್ಲಿ ಸ್ಥಾನ ಗಟ್ಟಿ ಮಾಡಿಕೊಂಡಿದ್ದ ಕೆಲವು ತಂಡಗಳು ನಮಗೆ ಈ ಬಾರಿ ಮೆಗಾ ಹರಾಜು ಬೇಡ ಎಂದು ಬಿಸಿಸಿಐನ ಬಳಿ ಬೇಡಿಕೆ ಇಟ್ಟಿದ್ದವು.
ಇದಕ್ಕೆ ತಲೆಕೊಡದ ಬಿಸಿಸಿಐ 2025ರ ಆರಂಭಿಕ ದಿನಗಳಲ್ಲೆ ಮೆಗಾ ಹರಾಜು ನೆಡೆಯುವುದು ಖಂಡಿತ ಎಂದು ಘೋಷಣೆ ಮಾಡಿತ್ತು. ಆದ್ದರಿಂದ ಈ ಮೆಗಾ ಹರಾಜಿಗೆ ಎಲ್ಲಾ ತಂಡಗಳೂ ಸಹ ಭಾರಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿವೆ.
ಕೊನೆದಾಗಿ ಪ್ರತಿ ತಂದಕ್ಕೂ ಸಹ ನಾಲ್ಕು ಜನ ಆಟಗಾರರನ್ನು ರೀಟೈನ್ ಮಾಡಿಕೊಳ್ಳುವ ಅವಕಾಶವನ್ನು ಬಿಸಿಸಿಐ ನೀಡಿದೆ. ಇದಲ್ಲದೆ ಮೆಗಾ ಹರಾಜಿನಲ್ಲಿ ತಮ್ಮ ತಂಡದ ಮತ್ತಿಬ್ಬರು ಆಟಗಾರರನ್ನು ಪುನಃ ಖರೀದಿಸಲು ಎರಡು RTM ಬಳಸಿಕೊಳ್ಳಬಹುದು ಎಂಬ ಸೂಚನೆ ಸಹ ನೀಡಿದೆ.
ಒಟ್ಟಾರೆ ಪ್ರತಿ ತಂಡವೂ ಕೂಡ ತಮ್ಮಲೇ ಇರುವ ಆರು ಜನ ಆಟಗಾರರನ್ನು ರೀಟೈನ್ ಮಾಡಿಕೊಳ್ಳಲು ಅವಕಾಶವಿದೆ. ಯಾವೆಲ್ಲಾ ತಂಡಗಳು ಯಾವ ಯಾವ ಆಟಗಾರರನ್ನು ಉಳಿಸಿಕೊಳ್ಳಲಿವೆ ಎಂದು ಕಾದು ನೋಡಬೇಕಾಗಿದೆ.