ಬೆಂಗಳೂರು: ಗಣಪತಿ ಉತ್ಸವದಲ್ಲಿ ನೀಡುವ ಆಹಾರ ಪದಾರ್ಥಗಳ ಶುಚಿತ್ವ, ಗುಣಮಟ್ಟ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಎಫ್ ಎಸ್ ಎಸ್ ಎಐ ಪರವಾನಗಿ ಪಡೆದಿರುವ ವ್ಯಕ್ತಿ ಅಥವಾ ಸಂಸ್ಥೆಗಳಿAದ ಮಾತ್ರ ಪ್ರಸಾದ ಸಿದ್ಧಪಡಿಸುವಂತೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಆದೇಶಿಸಿದೆ.
ಈ ಕುರಿತು ಉತ್ಸವ ಆಯೋಜಕರಿಗೆ ಎಚ್ಚರಿಕೆ ಕೊಟ್ಟ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಬಿಬಿಎಂಪಿಗೆ ಪತ್ರ ಬರೆದಿದೆ. ಪ್ರಸಾದ ವಿನಿಯೋಗ ಮಾಡುವಾಗ ಶುಚಿತ್ವ ಮತ್ತು ಗುಣಮಟ್ಟ ಸುರಕ್ಷತೆ ಪತ್ರ ಕಡ್ಡಾಯ ಹಾಗೆ ಬಿಬಿಎಂಪಿ ಅನುಮತಿ ಜೊತೆಗೆ ಆಹಾರ ವಿತರಣೆಗೂ ಅನುಮತಿ ಪತ್ರ ಇರಬೇಕು ಎಂದು ಸೂಚನೆ ನೀಡಿದೆ.