ಉಪಯುಕ್ತ ಸುದ್ದಿ

ಸರ್ಪ ಸಂಸ್ಕಾರ ಬುಕ್ಕಿಂಗ್ ಸ್ಲಾಟ್ ಮರುದಿನಕ್ಕೆ ಮುಂದೂಡಬಹುದು

Share It

ಬೆಂಗಳೂರು: ಕುಕ್ಕೆ ಸುಬ್ರಮಣ್ಯ ದೇವಸ್ಥಾನದಲ್ಲಿ ಸರ್ಪ ಸಂಸ್ಕಾರ ಪೂಜೆ ಮಾಡಿಸಲು ಬುಕ್ ಮಾಡಿ, ಕಾರಣಾಂತರದಿಂದ ಅದನ್ನು ಮುಂಡೂಡಲು ಇನ್ಮುಂದೆ ಅವಕಾಶ ನೀಡಲಾಗುತ್ತದೆ.

ಈ ಸಂಬಂಧ ಮುಜರಾಯಿ ಇಲಾಖೆ ಸುತ್ತೋಲೆಯೊಂದನ್ನು ಶೀಘ್ರದಲ್ಲೇ ಹೊರಡಿಸಲಿದ್ದು, ಬುಕ್ ಮಾಡಿದ ಸ್ಲಾಟ್ ಅನ್ನು ಮರುದಿನಕ್ಕೆ ಅಥವಾ ತಮಗೆ ಅಗತ್ಯವಾದ ದಿನಕ್ಕೆ ಮುಂದುವರಿಸಲು ಅವಕಾಶ ನೀಡಲು ತೀರ್ಮಾನಿಸಿದೆ.

ಈ ಹಿಂದೆ ಒಮ್ಮೆ ಸರ್ಪ ಸಂಸ್ಕಾರ ಪೂಜೆಗೆ ಸ್ಲಾಟ್ ಬುಕ್ ಮಾಡಿದರೆ, ಅದೇ ಸಮಯದಲ್ಲಿ ಪೂಜೆ ನಡೆಸಬೇಕಿತ್ತು. ಒಂದು ವೇಳೆ  ಅ ಅವಧಿಯಲ್ಲಿ ಪೂಜೆ ಮಾಡಿಸಲು ಸಾಧಗಯವಾಗದಿದ್ದರೆ, ಅದನ್ನು ಮರುದಿನ ಅಥವಾ ಮುಂದಿನ ದಿನಕ್ಕೆ ಕ್ಯಾರಿ ಮಾಡಲು ಅವಕಾಶವಿರಲಿಲ್ಲ.

ಈ ಸಂಬಂಧ ಇಲಾಖೆಗೆ ಅನೇಕ ದೂರುಗಳು ಬಂದಿದ್ದು, ಇದರಿಂದ ಭಕ್ತಾದಿಗಳಿಗೆ ತೊಂದರೆ ಯಾಗುತ್ತಿದೆ ಎಂದು ವರದಿಯಾಗಿತ್ತು. ಹೀಗಾಗಿ, ಇದೀಗ ಮುಜರಾಯಿ ಇಲಾಖೆ ಪೂಜೆಯ ಅವಧಿಯನ್ನು ಮರುದಿನ ಅಥವಾ ಮುಂದಿನ ಅವಧಿಗೆ ಕ್ಯಾರಿ ಮಾಡಲು ಅವಕಾಶ ಒದಗಿಸಲು ಸಜ್ಜಾಗಿದೆ.


Share It

You cannot copy content of this page