ರಾಜಕೀಯ ಸುದ್ದಿ

ಬಿಜೆಪಿ ವಿರುದ್ಧ ಸರಕಾರದಿಂದ ಕೋವಿಡ್ ಅಸ್ತ್ರ: ತನಿಖೆಗೆ ವಹಿಸಲು ಕ್ಯಾಬಿನೆಟ್ ಒಪ್ಪಿಗೆ?

Share It

ಬೆಂಗಳೂರು: ರಾಜ್ಯಪಾಲರ ಪ್ರಾಸಿಕ್ಯೂಷನ್ ಅನುಮತಿಯನ್ನು ರಾಜಕೀಯ ಧ್ವೇಷವಾಗಿಯೇ ಪರಿಗಣಿಸಿರುವ ಕಾಂಗ್ರೆಸ್ ಸರಕಾರ, ಬಿಜೆಪಿ ವಿರುದ್ಧ ಕೋವಿಡ್ ಹಗರಣಾಸ್ತ್ರ ಎಸೆಯಲು ಸಿದ್ಧತೆ ನಡೆಸಿದೆ.

ಸಿದ್ದರಾಮಯ್ಯ ವಿರುದ್ಧ ಮೂಡಾ ಹಗರಣದ ಹುರುಳು ಬಿಗಿಯಾಗುತ್ತಿದ್ದಂತೆ ಸರಕಾರ ತರಾತುರಿಯಲ್ಲಿ ಕೋವಿಡ್ ಕಾಲದ ವೈದ್ಯಕೀಯ ಇಲಾಖೆಯ ಹಗರಣದ ತನಿಖಾ ವರದಿಯನ್ನು ಪಡೆದುಕೊಂಡಿದೆ. ಈ ವರದಿಯ ಆಧಾರದ ಮೇಲೆ ಅಂದಿನ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮತ್ತು ಸಿಎಂ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ವಿರುದ್ಧ ತನಿಖೆ ನಡೆಸಲು ಮುಂದಾಗಿದೆ

ಗುರುವಾರ ಮಧ್ಯಾಹ್ನ3 ಗಂಟೆಗೆ ಸಚಿಚ ಸಂಪುಟ ಸಭೆ ನಡೆಯಲಿದ್ದು, ಸಚಿವ ಸಂಪುಟ ಸಭೆಯಲ್ಲಿ ಕೋವಿಡ್ ಕಾಲದ ಹಗರಣ ಮತ್ತು ಪಿಎಸ್ ಐ ಹಗರಣದ ತನಿಖಾ ವರದಿಯನ್ನು ಲೋಕಾಯುಕ್ತಕ್ಕೆ ನೀಡುವ ಕುರಿತು ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಬಿಜೆಪಿ ರಾಜ್ಯಪಾಲರ ಮೂಲಕ ಕಾಂಗ್ರೆಸ್ ಸರಕಾರ ಅಸ್ಥಿರ ಮಾಡುವ ಪ್ರಯತ್ನ ನಡೆಸುತ್ತಿರುವ ಕಾಂಗ್ರೆಸ್ ನಾಯಕರು, ಬಿಜೆಪಿಯನ್ನು ಇಂತಹ ಆರೋಪ ಮತ್ತು ಹಗರಣಗಳ ಮೂಲಕವೇ ಮಣಿಸಲು ಸಜ್ಜಾಗಿದೆ‌ ಹೀಗಾಗಿ, ನ್ಯಾ. ಡಿ. ಕುನ್ನಾ ಅವರ ಕೋವಿಡ್ ಹಗರಣದ ತನಿಖಾ ವರದಿಯನ್ನು ಲೋಕಾಯುಕ್ತ ತನಿಖೆಗೆ ವಹಿಸಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ಅದೆ ರೀತಿ ಬಿಜೆಪಿ ಕಾಲದಲ್ಲಿ ನಡೆದಿರುವ ಪಿಎಸ್ಐ ನೇಮಕ ಹಗರಣವನ್ನು ಸಹ ಲೋಕಾಯುಕ್ತ ತನಿಖೆಗೆ ಕೊಡುವ ಮೂಲಕ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ನಡೆಯುತ್ತಿದೆ. ಇದೀಗ ಕ್ಯಾಬಿನೆಟ್ ನಲ್ಲಿ ಈ ಎರಡು ವರದಿಗಳನ್ನು ತನಿಖೆಗೆ ವಹಿಸುವ ಕುರಿತು ತೀರ್ಮಾನ ತೆಗೆದುಕೊಳ್ಳಲು ಸರಕಾರ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.


Share It

You cannot copy content of this page