ನೊಣಗಳ ಕಾಟದಿಂದ ತಪ್ಪಿಸಿಕೊಳ್ಳಬೇಕೆ? ಈ ಪದ್ಧತಿಯನ್ನು ಅನುಸರಿಸಿ ಸಾಕು!
ಮನುಷ್ಯನಿಗೆ ದೊಡ್ದ ಪ್ರಾಣಿಗಳಿಗಿಂತ ಚಿಕ್ಕ ಚಿಕ್ಕ ಪ್ರಾಣಿಗಳು ಕೊಡುವ ಕಾಟವನ್ನು ತಡೆದುಕೊಳ್ಳಲು ಸಾಧ್ಯವಿಲ್ಲ. ನೊಣ ಮತ್ತು ಸೊಳ್ಳೆಗಳು ಮನುಷ್ಯನಿಗೆ ಹಿಂಸೆಯನ್ನು ನೀಡುವುದರಿಯಲ್ಲಿ ಎತ್ತಿದ ಕೈ. ಇಂದು ನಾವು ನೊಣದ ಬಗ್ಗೆ ಒಂದಷ್ಟು ಮಾಹಿತಿಯನ್ನು ತಿಳಿಯೋಣ.
ನೊಣವು ಕಸರೆ ಮತ್ತು ಕೆಟ್ಟ ವಸ್ತುಗಳ ಮೇಲೆ ಕುಳಿತುಕೊಳ್ಳುತ್ತದೆ. ಇದರಿಂದಾಗಿ ಆದರ ಕಳಿಗೆ ರೋಗ ರುಜಿನವನ್ನು ತರಬಲ್ಲ ರೋಗಾಣುಗಳು ಅಂಟಿಕೊಂಡು ನೊಣಗಳು ತಿನ್ನು ಪದಾರ್ಥದ ಮೇಲೆ ಕೂತಾಗ ಅದರಲ್ಲಿ ಸೇರಿ ನಮ್ಮ ದೇಹವನ್ನು ಸೇರುವ ಸಾಧ್ಯತೆ ಇರುತ್ತದೆ.
ನೊಣಗಳು ಸಾಮಾನ್ಯವಾಗಿ ಎಲ್ಲಿ ನೈರ್ಮಲ್ಯ ಇರುತ್ತದೋ ಮತ್ತು ಕೆಟ್ಟ ವಾಸನೆ ಮತ್ತು ಸ್ವಚ್ಛತೆಯಿಂದ ಕೂಡಿರುವುದಿಲ್ಲವೋ ಅಂತಹ ಸ್ಥಳದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತವೆ. ಇವುಗಳು ಕಾಲರಾ, ಇ ಕೊಲಿ, ಅತಿಸಾರ, ಟೈಫಾಯಿಡ್ ಮುಂತಾದ ಕಾಯಿಲೆಗಳನ್ನು ತರುತ್ತವೆ. ಜೊತೆಗೆ ಕಣ್ಣಿನ ಸೋಂಕಿನ ಸಮಸ್ಯೆಯನ್ನು ಸಹ ಇವುಗಳು ತರುವ ಸಾಧ್ಯತೆ ಇರುತ್ತದೆ. ಇವುಗಳಿಂದ ದೂರ ಇರುವುದು ಒಳ್ಳೆಯದು.
ವಿನೆಗರ್ ಮತ್ತು ಸೋಪ್ ಫ್ಲೈ ಟ್ರ್ಯಾಪ್
ಈ ಎರಡು ಪದಾರ್ಥಗಳನ್ನು ಒಂದು ಬಟ್ಟಲಿಗೆ ಹಾಕಿ ಮಿಶ್ರಣ ಮಾಡಿ ನೊಣಗಳು ಇರುವ ಜಾಗದಲ್ಲಿ ಇಡಿ. ನೊಣಗಳು ಅಲ್ಲಿಂದ ಜಾಗವನ್ನು ಕಾಲಿ ಮಾಡುತ್ತವೆ.
ಹೂವಿನ ಗಿಡಗಳು
ನೊಣಗಳು ಸಾಮಾನ್ಯವಾಗಿ ಹೂ ಗಳನ್ನು ಇಷ್ಟ ಪಡುತ್ತವೆ. ನಮ್ಮ ಮನೆಯ ಮುಂದೆ ಅಥವಾ ಬಾಲ್ಕನಿಯಲ್ಲಿ ಎಂತಹ ಗಿಡಗಳ ಜೊತೆ ಬದನೆ, ತುಳಸಿ, ಪುದೀನಾ, ಚಂಡು ಹೂ ಹೀಗೆ ಇತರ ವಾಸನೆ ಭರಿತ ಗಿಡಗಳನ್ನು ನೊಣ ಇಷ್ಟ ಪಡುವುದಿಲ್ಲ. ಇದರಿಂದಾಗಿ ನಿಮ್ಮ ಮನೆಗೆ ನೊಣ ಬರುವ ಸಮಸ್ಯೆ ಪರಿಹಾರ ಆಗಬಹುದು.
ಮನೆಯನ್ನು ಸ್ವಚ್ಚವಾಗಿಟ್ಟುಕೊಳ್ಳುವುದು:
ಸಮಯಕ್ಕೆ ಸರಿಯಾಗಿ ನೆಲವನ್ನು ತೊಳೆಯುವುದು. ಆಹಾರವನ್ನು ಸೇವಿಸಿದ ಪಾತ್ರೆಗಳನ್ನು ಕಾಲ ಕಾಲಕ್ಕೆ ಸ್ವಚ್ಛಗೊಳಿಸುವುದು. ಹಾಗೂ ಯಾವುದೇ ಸಿಹಿ ಪದಾರ್ಥವನ್ನು ತೆರೆದು ಇಡದೇ ಇರುವುದರಿಂದ ನೊಣವು ಬರುವುದನ್ನು ತಡೆಯಬಹುದು.
ಸಾರಭೂತ ತೈಲಗಳನ್ನು ಬಳಸಿ:
ಲ್ಯಾವೆಂಡರ್, ಯೂಕಲಿಪ್ಟಸ್, ಪುದೀನಾ ಮತ್ತು ಲೆಮೊನ್ಗ್ರಾಸ್ ಈ ಎಣ್ಣೆಗಳನ್ನು ನಿಮ್ಮ ಮನೆಯ ಭಾಗಗಳಲ್ಲಿ ಇಡುವುದರಿಂದ ಇದರ ವಾಸನೆಯು ನೊಣಗಳನ್ನು ಬರದಂತೆ ತಡೆಯುತ್ತದೆ.


