ಉಪಯುಕ್ತ ಸುದ್ದಿ

ಪೌರಕಾರ್ಮಿಕರ ಹುದ್ದೆಗೆ 46,000 ಪದವೀಧರ ಅಭ್ಯರ್ಥಿಗಳ ಅರ್ಜಿ: ಪ್ರಧಾನಿ ಮೋದಿ ಅವರ ನಿರುದ್ಯೋಗ ಸೃಷ್ಟಿಯ ಎಫೆಕ್ಟ್ ಎಂದ ನೆಟ್ಟಿಗರು

Share It

ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಮೊದಲ ಬಾರಿಗೆ ಅಂದರೆ 2014 ರಲ್ಲಿ ಭಾರತದ ಪ್ರಧಾನಿಯಾದಾಗ ನಿರುದ್ಯೋಗ ಸಮಸ್ಯೆಯನ್ನು ಸಂಪೂರ್ಣವಾಗಿ ಪರಿಹರಿಸುತ್ತೇನೆ ಎಂದು ಹೇಳಿದ್ದರು. ಹೀಗ ಮೂರನೇ ಬಾರಿಗೆ ಪ್ರಧಾನಿಯಾದರೂ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಬದಲಾಗಿಲ್ಲ.

ಮತ್ತೊಂದು ವಿಚಾರವೆಂದರೆ ಸದ್ಯ ಹರಿಯಾಣದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಮುಗಿಸಿರುವ ಯುವಕರು 46,102 ಪೌರ ಕಾರ್ಮಿಕರ ಹುದ್ದೆಗೆ ಅರ್ಜಿಯನ್ನು ಸಲ್ಲಿಸಿದ್ದಾರೆ. ಇಲ್ಲಿ ನಾವು ಕೆಲಸ ಯಾವುದು ಅನ್ನುವುದಕ್ಕಿಂತ ಅದನ್ನ ಮಾಡಲು ನಮಗೆ ಇಷ್ಟು ವರ್ಷಗಳ ಕಾಲ ಓದಬೇಕಿತ್ತ ಎಂಬ ಪ್ರಶ್ನೆ ಕಾಡುತ್ತಿದೆ. ನೇರವಾಗಿ ಹೇಳಬೇಕೆಂದರೆ ಪೌರ ಕಾರ್ಮಿಕರ ಹುದ್ದೆಗೆ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಮುಗಿಸಿದ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಿರುವುದು ವಿಪರ್ಯಾಸವೇ ಸರಿ.

ಈ ಹುದ್ದೆಯ ಅನ್ವಯ ಹರಿಯಾಣ ರಾಜ್ಯದ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಕಸ ಗುಡಿಸುವ ಗ್ರೂಪ್ ಡಿ ಹುದ್ದೆ ಇದಾಗಿದೆ. ಸರ್ಕಾರವು ಹರಿಯಾಣ ಕೌಶಲ್ ರೋಜಗಾರ್ ನಿಗಮ್ ಲಿಮಿಟೆಡ್ ಕಂಪನಿ ಉದ್ಯೋಗಿಗಳ ನೇಮಕಾತಿಗೆ ಹೋರ ಗುತ್ತಿಗೆ ನೀಡಿದೆ. ಈ ಸಂಸ್ಥೆ ನೀಡಿರುವ ಮಾಹಿತಿಯ ಪ್ರಕಾರ ಒಟ್ಟು 3.95 ಲಕ್ಷ ಮಂದಿ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಿದ್ದಾರೆ.

ಆ ಪೈಕಿ 6,112 ಸ್ನಾತಕೋತ್ತರ ಪದವೀಧರರು ಹಾಗೂ 39,990 ಪದವೀಧರರು ಅರ್ಜಿಯನ್ನು ಸಲ್ಲಿಸಿದ್ದಾರೆ ಎಂಬುದು ಮುಖ್ಯ ವಿಷಯ. 1,17,144 ಅಭ್ಯರ್ಥಿಗಳು 12 ನೇ ತರಗತಿಯನ್ನು ಪೂರ್ಣಗೊಳಿಸಿದ್ದಾರೆ.

ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ ಹರಿಯಾಣದಲ್ಲಿ ಅತಿಯಾದ ನಿರುದ್ಯೋಗ ಸಮಸ್ಯೆ ಕಾಡುತ್ತಿದೆ. ಓದಿಗೆ ತಕ್ಕನಾದ ಉದ್ಯೋಗ ಯುವಕರಿಗೆ ಸಿಗುತ್ತಿಲ್ಲ. ಆದ್ದರಿಂದ ಯಾವುದೇ ಉದ್ಯೋಗವಾದರು ಸರಿ ಅದಕ್ಕೆ ಪದವೀಧರರು ಅರ್ಜಿಯನ್ನು ಸಲ್ಲಿಸುತ್ತಿದ್ದಾರೆ.

ಹರಿಯಾಣದ ರಚನಾ ದೇವಿ ಎಂಬುವವರ ಮಾತನಾಡಿ,” ಶಿಕ್ಷಣ ಪಡೆದು 4 ವರ್ಷ ಆಗಿದೆ. ಇನ್ನು ಯಾವುದೇ ಉದ್ಯೋಗ ಸಿಕ್ಕಿಲ್ಲ. ಅದರಿಂದ ನಾನು ಈ ಹುದ್ದೆಗೆ ಅರ್ಜಿಸಲ್ಲಿಸಿದ್ದೇನೆ ಎಂದು ಸ್ನಾತಕೋತ್ತರ ಪದವಿಯನ್ನು ಮುಗಿಸಿರುವ ಇವರು ಹೇಳುತ್ತಾರೆ” ಸುಮಿತ್ ಶರ್ಮಾ ಅವರು ಫಾರ್ಮಸಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ವ್ಯಾಸಂಗ ಮಾಡುತ್ತಿದ್ದಾರೆ. ಅವರೂ ಕೂಡ ಪೌರಕಾರ್ಮಿಕ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ.

ಪಿರಮಿಡ್ಸ್ ಹೌಸ್ ಹೋಲ್ಡ್ ಸಮೀಕ್ಷೆಯ ಪ್ರಕಾರ ಭಾರತದಲ್ಲಿ 2024 ರ ವೇಳೆ ಸುಮಾರು 9.2 ರಷ್ಟು ನಿರುದ್ಯೋಗ ಸಮಸ್ಯೆ ಏರಿಕೆಯಾಗಿದೆ ಎಂದು ವರದಿ ಮಾಡಿದೆ. ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ತ್ವರಿತವಾಗಿ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ ಗ್ರಾಮೀಣ ನಿರೋದ್ಯೋಗ 9.3 ರಷ್ಟು ಹಾಗೂ ನಗರದ ನಿರುದ್ಯೋಗ 8.9 ರಷ್ಟು ಇದೆ. ಹರಿಯಾಣದಲ್ಲಿ ಮುಖ್ಯವಾಗಿ 15 ವರ್ಷದಿಂದ 29 ವರ್ಷದ ನಡುವಿನ ಯುವಕರು ನಿರೋದ್ಯೋಗಿಗಳು ಎಂಬ ಮಾಹಿತಿಯನ್ನು ಈ ಸಂಸ್ಥೆ ನೀಡಿದೆ.

ಒಟ್ಟಾರೆ ಈ ಎಲ್ಲಾ ಅಂಶಗಳನ್ನು ಗಮನಿಸುವಾಗ ತಿಳಿಯುವ ಅಂಶವೆಂದರೆ ಮೋದಿ ಕೇವಲ ಭಾಷಣಕ್ಕೆ ಮಾತ್ರ ಸೀಮಿತ ಅಂತ. ಅವರು 2ಕೋಟಿ ಉದ್ಯೋಗವನ್ನು ಸೃಷ್ಟಿ ಮಾಡುವ ಬಗ್ಗೆ ಹೇಳಿದ್ದರು. ಆದ್ರೆ ಅದು ಸಾಧ್ಯವಾಗಿರೋದು ಮಾತ್ರ 1.5ಕೋಟಿ ಎಂದು ಅಂಕಿ ಅಂಶಗಳು ಹೇಳುತ್ತವೆ. ಇನ್ನು ಬಿಜೆಪಿಯೂ ಕೋಮುವಾದವನ್ನು ಸೃಷ್ಟಿ ಮಾಡುತ್ತಿದೆ. ಯುವಕರ ತಲೆಗೆ ಧರ್ಮದ ಆಫೀಮನ್ನು ತುಂಬುತ್ತಿದೆ. ಇದು ರಾಜಕೀಯ ಎಂಬುದನ್ನು ಯುವಕರು ಇನ್ನಾದರೂ ತಿಳಿಯಬೇಕಿದೆ.


Share It

You cannot copy content of this page