ಚಂಡೀಗಢ: ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಕೇವಲ 100 ಗ್ರಾಂ ಹೆಚ್ಚಿನ ತೂಕ ಹೊಂದಿದ್ದಾರೆ ಎಂದು ಭಾರತದ ಪರ ಮಹಿಳಾ ಕುಸ್ತಿಯಲ್ಲಿ ಚಿನ್ನದ ಪದಕ ಮಿಸ್ ಮಾಡಿಕೊಂಡಿದ್ದ ವಿನೇಶ್ ಪೊಗಟ್ ನಂತರ ಕುಸ್ತಿ ಸ್ಪರ್ಧೆಗೆ ವಿದಾಯ ಹೇಳಿದರು. ಇದೀಗ ಕ್ರೀಡಾ ಚಟುವಟಿಕೆ ತ್ಯಜಿಸಿ ಸಕ್ರಿಯ ರಾಜಕೀಯಕ್ಕೆ ಪಾದಾರ್ಪಣೆ ಮಾಡಿರುವ ವಿನೇಶ್ ಪೊಗಟ್, ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್
ಪಕ್ಷದ ಪಡೆದಿದ್ದಾರೆ.
ಹರಿಯಾಣದ ಜುಲಾನಾದಿಂದ ವಿನೇಶ್ ಫೋಗಟ್ ಅವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಗರ್ಹಿ ಸಂಪ್ಲಾ-ಕಿಲೋಯ್ ಮತ್ತು ರಾಜ್ಯ ಘಟಕದ ಮುಖ್ಯಸ್ಥ ಉದಯ್ ಭಾನ್ ಹೊಡಾಲ್‌ನಿಂದ ಸ್ಪರ್ಧಿಸಲಿದ್ದಾರೆ ಎಂದು ಪಕ್ಷವು ಚುನಾವಣೆಗೆ 31 ಹೆಸರುಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಲಾಡ್ವಾದಿಂದ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ವಿರುದ್ಧ ಕಾಂಗ್ರೆಸ್‌ನ ಮೇವಾ ಸಿಂಗ್ ಕಣಕ್ಕಿಳಿಯಲಿದ್ದಾರೆ. ಸುರೇಂದರ್ ಪನ್ವಾರ್ ಸೋನಿಪತ್‌ನಿಂದ, ಭರತ್ ಭೂಷಣ್ ಬಾತ್ರಾ ರೋಹ್ಟಕ್‌ನಿಂದ, ಕುಲದೀಪ್ ವಾಟ್ಸ್ ಬದ್ಲಿಯಿಂದ, ಚಿರಂಜೀವ್ ರಾವ್ ರೆವರಿಯಿಂದ ಮತ್ತು ನೀರಜ್ ಶರ್ಮಾ ಫರಿದಾಬಾದ್ ಎನ್‌ಐಟಿಯಿಂದ ಸ್ಪರ್ಧಿಸಲಿದ್ದಾರೆ.
ಕುಸ್ತಿಪಟುಗಳಾದ ವಿನೇಶ್ ಫೋಗಟ್, ಬಜರಂಗ್ ಪೂನಿಯಾ ಅವರುಗಳು ಒಟ್ಟಿಗೆ ಶುಕ್ರವಾರ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾದರು.