ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ-2 ಆರೋಪಿ ನಟ ದರ್ಶನ್ ಅವರಿಗೆ ಕೊನೆಗೂ ಟಿವಿ ಸೌಲಭ್ಯ ಒದಗಿಸಲಾಗಿದೆ. ಕಳೆದ 5 ದಿನಗಳ ಹಿಂದೆ ತಾವಿರುವ ಸೆಲ್ ಗೆ ಟಿವಿ ಅಳವಡಿಸಿ ಎಂದು ದರ್ಶನ್ ವಿನಂತಿಸಿಕೊಂಡಿದ್ದರು.
ಜೈಲಿನ ನಿಯಮಗಳ ಪ್ರಕಾರ ಖೈದಿಗಳಿಗೆ ಟಿವಿ ನೀಡಬಹುದು. ಆದರೆ ಟಿವಿ ರಿಪೇರಿ ಇದ್ದ ಕಾರಣ ಆಗ ತಕ್ಷಣವೇ ಟಿವಿಯನ್ನು ದರ್ಶನ್ ಸೆಲ್ ನಲ್ಲಿ ಅಳವಡಿಸಿರಲಿಲ್ಲ. ಆದಾಗ್ಯೂ ಇದೀಗ ಕೊನೆಗೂ ದರ್ಶನ್ ಅವರ ಸೆಲ್ ನಲ್ಲಿ ಟಿವಿ ಅಳವಡಿಸಲಾಗಿದೆ.
ಮೂಲಗಳ ಪ್ರಕಾರ ದರ್ಶನ್ ಅವರು ಸೆಲ್ ನಲ್ಲಿದ್ದುಕೊಂಡೇ ಕನ್ನಡ ನ್ಯೂಸ್
ಚಾನೆಲ್ ಗಳನ್ನು ವೀಕ್ಷಿಸುತ್ತಿದ್ದಾರೆ.