ಮಂಡ್ಯ: ಬೇಸಿಗೆ ಅಂದ್ರೆ ತಂಪಾದ ತಿನುಸುಗಳ ಕಡೆಗೆ ಮನಸು ಎಳೆಯೋದು ಸಹಜ. ಆದ್ರೆ, ಅದೇ ತಂಪಾದ ತಿನಿಸಿಗಳು ಪ್ರಾಣಕ್ಕೆ ಎರವಾದರೆ?
ಇಂತಹದ್ದೇ ಒಂದು ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಲ್ಲಿ ನಡೆದಿದೆ. ಇಲ್ಲಿನ ಬೆಟ್ಟಹಳ್ಳಿ ಗ್ರಾಮದಲ್ಲಿ ಐಸ್ ಕ್ರೀಂ ತಿಂದ ನಂತರ ಅಸ್ವಸ್ಥಗೊಂಡು ಒಂದೂವರೆ ವರ್ಷದ ಅವಳಿ ಮಕ್ಕಳಿಬ್ಬರು ಅಸುನೀಗಿದ್ದಾರೆ. ಮಕ್ಕಳ ತಾಯಿ ಕೂಡ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಊರೂರು ಮೇಲೆ ಐಸ್ ಕ್ರೀಂ ಮಾರಾಟ ಮಾಡಲು ಬರುವ ವ್ಯಕ್ತಿ ಎಂದಿನಂತೆ ಬಂದಿದ್ದಾನೆ. ಮಹಿಳೆ ತನ್ನ ಒಂದೂವರೆ ವರ್ಷದ ಇಬ್ಬರು ಮಕ್ಕಳಿಗೆ ಐಸ್ ಕ್ರೀಂ ತೆಗೆದುಕೊಟ್ಟು, ತಾನು ಐಸ್ ಕ್ರೀಂ ತಿಂದಿದ್ದಾರೆ. ಇದ್ದಕ್ಕಿದ್ದಂತೆ ಅಸ್ವಸ್ಥಗೊಂಡ ಮಕ್ಕಳು ಮನೆಯಲ್ಲಿಯೇ ಮೃತಪಟ್ಟರೆ, ತಾಯಿ ಆರೋಗ್ಯ ಗಂಭೀರವಾಗಿ ದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಪೂಜಾ ಮತ್ತಿ ಪ್ರಸನ್ನ ಎಂಬ ಎರಡು ಮಕ್ಕಳನ್ನು ಹೊಂದಿದ್ದ ತಾಯಿ ಕೊಡಿಸಿದ ಐಸ್ ಕ್ರೀಮ್ ಆ ಮಕ್ಕಳನ್ನು ಬಲಿ ಪಡೆದಿದೆ. ಮಕ್ಕಳ ಶವವನ್ನು ವಿಮ್ಸ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ತರಲಾಗಿದೆ. ತಾಯಿಗೆ ಚಿಕಿತ್ಸೆ ಮುಂದುವರಿದಿದೆ. ಅನುಮಾನಾಸ್ಪದ ಸಾವಿನ ಪ್ರಕರಣ ದಾಖಲು ಮಾಡಿಕೊಂಡಿರಿವ ಅರಕೆರೆ ಪೊಲೀಸರು ಐಸ್ ಕ್ರೀಂ ಮಾರಾಟಕ್ಕೆ ಬಂದ ವ್ಯಕ್ತಿಗಳ ಶೋಧ ನಡೆಸುತ್ತಿದ್ದಾರೆ.