ರಾಜ್ಯ ರಾಜಕಾರಣದಲ್ಲಿ ಅಚ್ಚರಿಯ ಬೆಳವಣಿಗೆ: ಸಿಎಂ ನಿವಾಸಕ್ಕೆ ದೌಡಾಯಿಸಿದ ಹಿರಿಯ ಸಚಿವರು, ನಾಯಕರು
ಬೆಂಗಳೂರು: ಬಹುಮತದ ಸರಕಾರ ಅಸ್ತಿತ್ವದಲ್ಲಿದ್ದರೂ, ಮೂಡಾ ಹಗರಣದಿಂದ ಕಾಂಗ್ರೆಸ್, ವಿಚಲಿತವಾಗಿದ್ದು, ಅಚ್ಚರಿಯ ಬೆಳವಣಿಗೆಗಳು ನಡೆಯುತ್ತಿವೆ.
ಸಿಎಂ ನಿವಾಸ ಕಾವೇರಿಗೆ ಮಾಜಿ ಸಚಿವ ಆರ್.ವಿ.ದೇಶಪಾಂಡೆ, ಸಚಿವರಾದ ಎಂ.ಬಿ.ಪಾಟೀಲ್, ಸತೀಶ್ ಜಾರಕಿಹೊಳಿ ಸೇರಿದಂತೆ ಅನೇಕ ನಾಯಕರು ದೌಡಾಯಿಸಿದ್ದಾರೆ.
ಸಿಎಂ ವಿರುದ್ಧದ ಪ್ರಾಸಿಕ್ಯೂಷನ್ ಅನುಮತಿ ಸಂಬಂಧ ಹೈಕೋರ್ಟ್ ವಿಚಾರಣೆ ಪೂರ್ಣಗೊಂಡಿದ್ದು, ತೀರ್ಪು ಶೀಘ್ರದಲ್ಲೇ ಹೊರಬರುವ ಸಾಧ್ಯತೆ ಇದೆ. ಸಿಎಂ ವಿರುದ್ಧದ ಪ್ರಾಸಿಕ್ಯೂಷನ್ ಗೆ ಅನುಮತಿ ಸಿಗುತ್ತದೆಯೋ ಅಥವಾ ರಾಜ್ಯಪಾಲರ ನಿರ್ಣಯ ತಪ್ಪ ಎಂಬ ತೀರ್ಪು ಬರಲಿದೆಯೋ ಎಂಬ ಕುತೂಹಲ ಮನೆ ಮಾಡಿದೆ.
ಈ ಕುತೂಹಲದ ನಡುವೆ ಸಿಎಂ ಸಿದ್ದರಾಮಯ್ಯ ಮನೆಯಲ್ಲಿಯೇ ಉಳಿದು ಮುಂದಿನ ಬೆಳವಣಿಗೆಯ ಬಗ್ಗೆ ಅವಲೋಕನ ಮಾಡುತ್ತಿದ್ದು, ಮನೆಗೆ ಅನೇಕ ಹಿರಿಯ ಸಚಿವರು ಭೇಟಿ ನೀಡಿದ್ದಾರೆ. ಇದು ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ ಎನ್ನಬಹುದು.


