ಉಪಯುಕ್ತ ಸುದ್ದಿ

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಶಾಕ್: ಪರೀಕ್ಷೆ ಅವಧಿ ಕಡಿಮೆ ಮಾಡಿದ ರಾಜ್ಯ ಸರ್ಕಾರ

Share It

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಯ ಅವಧಿಯನ್ನು 15 ನಿಮಿಷಗಳ ಕಾಲ ಇಳಿಕೆ ಮಾಡುವುದರ ಮೂಲಕ ವಿದ್ಯಾರ್ಥಿಗಳಿಗೆ ಸರ್ಕಾರ ಶಾಕ್ ನೀಡದೆ.

ಸಮಯ ಕಡಿತ ಮಾಡಿರುವ ಕುರಿತು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸುತ್ತೋಲೆ ಹೊರಡಿಸಿ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಇಲಾಖೆ ವೆಬ್ ಸೈಟ್ ನಲ್ಲಿ ಪ್ರಕಟ ಗೊಳಿಸಿದೆ.ಬ

ಈ ಮೊದಲು ವಿದ್ಯಾರ್ಥಿಗಳಿಗೆ ಉತ್ತರ ಬರೆಯಲು 3 ಗಂಟೆ 15 ನಿಮಿಷ ಸಮಯ ಕೊಡಲಾಗಿತ್ತು. 3 ಗಂಟೆ ಉತ್ತರ ಬರೆಯಲು ಮತ್ತು 15 ನಿಮಿಷಗಳು ಪ್ರಶ್ನೆ ಪತ್ರಿಕೆ ಓದಲು ನೀಡಲಾಗುತ್ತಿತ್ತು.

ಹೊಸ ನಿಯಮದ ಪ್ರಕಾರ ಉತ್ತರ ಬರೆಯಲು 2 ಗಂಟೆ 45 ನಿಮಿಷ ಸಮಯ ಮತ್ತು 15 ನಿಮಿಷ ಪ್ರಶ್ನೆ ಪತ್ರಿಕೆ ಓದಲು ಅವಕಾಶ ನೀಡಲಾಗಿದೆ.


Share It

You cannot copy content of this page