ಆರೋಗ್ಯ ರಾಜಕೀಯ ಸುದ್ದಿ

ವೈದ್ಯಕೀಯ ಸಿಬ್ಬಂದಿಗೆ ಎಐ ಆಧಾರಿತ ಭದ್ರತಾ ವ್ಯವಸ್ಥೆ

Share It

ಬೆಂಗಳೂರು: ರಾಜ್ಯದಲ್ಲಿ ಕಾರ್ಯನಿರ್ವಹಿಸುವ ಮಹಿಳಾ ವೈದ್ಯಕೀಯ ಸಿಬ್ಬಂದಿಗೆ ಅತ್ಯಾಧುನಿಕ ಮತ್ತು ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಭದ್ರತಾ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ ಹೇಳಿದರು.
ಶುಕ್ರವಾರ ವಿಕಾಸಸೌಧದಲ್ಲಿ ನಡೆದ ಸಭೆಯಲ್ಲಿ, ಸುರಕ್ಷತೆಗೆ ಸರ್ಕಾರ ತೆಗೆದುಕೊಳ್ಳಬಹುದಾದ ಕ್ರಮಗಳನ್ನು ಅಧಿಕಾರಿಗಳು ವಿವರಿಸಿದರು.
ಪಶ್ಚಿಮ ಬಂಗಾಳದಲ್ಲಿ ವೈದ್ಯ ವಿದ್ಯಾರ್ಥಿನಿಯ ಮೇಲಿನ ಅತ್ಯಾಚಾರ ಮತ್ತು ಕೊಲೆ, ಬಿಹಾರದಲ್ಲಿ ಶುಕ್ರೂಸಕಿ ಮೇಲಿನ ಅತ್ಯಾಚಾರ ಯತ್ನ ಪ್ರಕರಣಗಳ ಕಾರಣ ಮಹಿಳಾ ವೈದ್ಯಕೀಯ ಸಿಬ್ಬಂದಿಯ ಭದ್ರತೆ ಒದಗಿಸುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.

ಸಿಸಿ ಕ್ಯಾಮೆರಾ ಕಣ್ಗಾವಲನ್ನು ಹೆಚ್ಚಿಸುವುದು, ಸಹಾಯವಾಣಿ ಆರಂಭ, ಮಹಿಳಾ ಸಿಬ್ಬಂದಿ ಮತ್ತು ಪುರುಷ ಸಿಬ್ಬಂದಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿ, ಮಹಿಳಾ ಸಿಬ್ಬಂದಿಗೆ ವೈಯಕ್ತಿಕ ತುರ್ತು ಅಲಾರಂ, ತುರ್ತು ಅಲಾರಂ ಮೇಲ್ವಿಚಾರಣೆಗೆ ನಿವೃತ್ತ ಸೈನಿಕರನ್ನು ಒಳಗೊಂಡ ನಿಯಂತ್ರಣ ಕೊಠಡಿ ಸ್ಥಾಪನೆಯ ಪ್ರಸ್ತಾವಗಳನ್ನು ಅಧಿಕಾರಿಗಳು ಸಭೆಯ ಮುಂದೆ ಇರಿಸಿದರು.

ಅವುಗಳನ್ನು ಪರಿಸೀಲಿಸಿದ ಸಚಿವರು, ಭದ್ರತಾ ಕ್ರಮಗಳನ್ನು ಅನುಷ್ಠಾನಕ್ಕೆ ತರಲು ಸಮಿತಿ ರಚಿಸಲಾಗುವುದು ಎಂದು ಹೇಳಿದರು.

ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹಿಸಿನ್, ಜಂಟಿ ಕಾರ್ಯದರ್ಶಿ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹಿಸಿನ್, ಜಂಟಿ ಕಾರ್ಯದರ್ಶಿ ವೆಂಕಟೇಶಮೂರ್ತಿ, ನಿರ್ದೇಶಕಿ ಡಾ.ಬಿ.ಎಲ್.ಸುಜಾತಾ ರಾಥೋಡ್. ರಾಷ್ಟ್ರೀಯ ವೈದ್ಯಕೀಯ ಮಿಷನ್ ನಿರ್ದೇಶಕ ವೈ.ನರ್ವಿನ್ ಭಟ್ ಇದ್ದರು.


Share It

You cannot copy content of this page