ಪ್ರಜ್ವಲ್ ರೇವಣ್ಣನವರ ತಪ್ಪನ್ನು ಮನ್ನಿಸಿ ದೇವೇಗೌಡರ ಮುಖ ನೋಡಿ ಮತ ನೀಡಿ
ಚನ್ನರಾಯಪಟ್ಟಣ: ಪ್ರಜ್ವಲ್ ರೇವಣ್ಣನವರ ತಪ್ಪನ್ನು ಮನ್ನಿಸಿ ದೇವೇಗೌಡರ ಮುಖ ನೋಡಿ ಮತ ನೀಡಿ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದರು.
ಅವರು ಪಟ್ಟಣದ ಮಾಧ್ಯಮಿಕ ಶಾಲಾ ಆವರಣದಲ್ಲಿ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್‌ರೇವಣ್ಣ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ ರಾಜ್ಯದಲ್ಲಿ ಸುಮಾರು 2.5ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ ಇದನ್ನು ಭರ್ತಿ ಮಾಡಬೇಕು. 2024ನೇ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಸರ್ಕಾರ ಮಾಡಲು ಸಾಧ್ಯವಾಗದು ಆದ್ದರಿಂದ ಚುನಾವಣಾ ಮೈತ್ರಿ ಮಾಡಿಕೊಂಡು ಈ ಬಾರಿ ಮೋದಿಯವರನ್ನು ಬಲಪಡಿಸಲು ನಾವುಗಳು ಕೈಜೋಡಿಸ ಬೇಕಾಗಿದೆ.
ನಾನು ರಾಜಕೀಯಕ್ಕೆ ಬರಬೇಕು ಎಂದು ಬಂದವನಲ್ಲ ಅಚಾನಕ್ಕಾಗಿ ಬಂದವನು ದೇವೇಗೌಡರು 4ವರ್ಷ ಮಾತ್ರ ಅಧಿಕಾರದಲ್ಲಿ ಇದ್ದವರು. ದೇವೇಗೌಡರ ಉದ್ದೇಶ ಹಾಗೂ ಕನಸುಗಳನ್ನು ಈಡೇರಿಸುವುದು ನಮ್ಮಗಳ ಕರ್ತವ್ಯವಾಗಿದೆ. ಪ್ರಜ್ವಲ್ ರೇವಣ್ಣ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದು ಹುಡುಗ ಏನಾದರೂ ತಪ್ಪಿ ಮಾಡಿದ್ದರೆ ಕ್ಷಮಿಸಿ ಈ ಬಾರಿ ಮತ ನೀಡಬೇಕು. ತ್ರಿವಳಿ ತಲಾಕ್ ನಿಷೇಧ ಮಾಡಿ ಮುಸ್ಲಿಂ ಮಹಿಳೆಯರಿಗೆ ನ್ಯಾಯ ಕೊಡಿಸಿದ್ದು ಮೋದಿಯವರು ಎಂದರು, ಲೋಕಸಭೆ ಚುನಾವಣೆ ಮುಗಿದ ನಂತರ ಹೆಚ್ಚುವರಿಯಾಗಿ ಎರಡು ಲಕ್ಷ ಮೆಟ್ರಿಕ್ ಟನ್ ಕೊಬ್ಬರಿಯನ್ನು ಪುನ ಖರೀದಿ ಪ್ರಾರಂಭಿಸಿ ಕ್ವಿಂಟಾಲಿಗೆ 15 ಸಾವಿರ ಬೆಂಬಲ ಬೆಲೆ ನಿಗದಿ ಮಾಡಿಸುತ್ತೇವೆ ಎಂದರು.
ಶಾಸಕ ಸಿ. ಎನ್. ಬಾಲಕೃಷ್ಣ ಮಾತನಾಡಿ ತಾಲೂಕಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದು, ರೈತರ ಪರವಾದ ಪಕ್ಷ ಏನಾದರೂ ಇದ್ದರೆ ಅದು ಜೆಡಿಎಸ್ ಪಕ್ಷ, ತಾಲೂಕಿನಲ್ಲಿ 200 ಹಳ್ಳಿಗಳಲ್ಲಿ ಸುತ್ತಿ ಮತಯಾಚನೆ ಮಾಡಿದ್ದೇವೆ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯನೋ, ಪ್ರಜ್ವಲ್ ಗೆಲ್ಲುವುದು ಅಷ್ಟೇ ಸತ್ಯ , 1 ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಜಯಗಳಿಸಲಿದ್ದಾರೆ, ದೇಶದಲ್ಲಿ 400 ಸೀಟ್‌ಗಳನ್ನು ಪಡೆದು ನರೇಂದ್ರ ಮೋದಿಯವರು ಮೂರನೇ ಬಾರಿಗೆ ಪ್ರಧಾನಿಯಾಗುವುದು ನಿಶ್ಚಿತ,ದೇವೇಗೌಡರು ಸಮರ್ಥ ನಾಯಕ ದೇಶವನ್ನು ಮುನ್ನಡೆಸುವ ಸಾಮರ್ಥ ಇದ್ದರೆ ಅದು ಮೋದಿಯವರಿಗೆ ಮಾತ್ರ ಎಂದರು,ಎಲ್ಲಾ ವರ್ಗದ ಜನರಿಗೆ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಸಹಾಯ ಮಾಡಿದ್ದಾರೆ, ಮೋದಿಯವರ ಜೊತೆ ಮಾತನಾಡಿ ನಫೆಡ್ ಕೊಬ್ಬರಿ ಖರೀದಿ ಕೇಂದ್ರ ಪ್ರಾರಂಭಿಸಿ ರೈತರಿಗೆ ಬೆಂಬಲ ಬೆಲೆ ನೀಡುವಲ್ಲಿ ಸಫಲರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಮಾಜಿ ಮಂತ್ರಿ ಹೆಚ್. ಡಿ. ರೇವಣ್ಣ ಮಾತನಾಡಿ ಈ ಬಾರಿ ಜೆಡಿಎಸ್ ಪಕ್ಷವನ್ನು ಬೆಂಬಲಸಿ ನಾವುಗಳು ಬಿಜೆಪಿ ಜೊತೆ ಮಂತ್ರಿ ಮಾಡಿಕೊಂಡಿರುವುದು ಮೋದಿಯರ ನಾಯಕತ್ವವನ್ನು ಬಲಪಡಿಸಲು, ಕಾಂಗ್ರೆಸ್ ಸರ್ಕಾರ ಅಧಿಕಾರದ ಅವಧಿಯಲ್ಲಿ ಬಡಜನರಿಗೆ ಅನುಕೂಲ ಮಾಡಿರುವುದಕ್ಕಿಂತ ಅನಾನುಕೂಲವೇ ಹೆಚ್ಚಾಗಿದೆ, ದೇವೇಗೌಡರಿಗೆ ರಾಜಕೀಯವಾಗಿ ಶಕ್ತಿ ನೀಡಿದಂತಹ ಕ್ಷೇತ್ರ ಜಿಲ್ಲೆಯಲ್ಲಿ ಇದ್ದರೆ ಅದು ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರ ಎಂದರು, ಲೋಕಸಭೆ ಚುನಾವಣೆ ನಂತರ ಚನ್ನರಾಯಪಟ್ಟಣ ತಾಲೂಕಿಗೆ ಸರ್ಕಾರಿ ಇಂಜಿನಿಯರ್ ಕಾಲೇಜು ಹಾಗೂ ಸರ್ಕಾರಿ ಡಿಪ್ಲೋಮಾ ಕಾಲೇಜು ತೆರೆಯಲು ಮುಂದಾಗುತ್ತೇವೆ ಎಂದರು.
ಪಟ್ಟಣದ ಧನಲಕ್ಷ್ಮಿ ಚಿತ್ರಮಂದಿರದಿoದ ಬೃಹತ್ ರೋಡ್ ಶೋ ಆರಂಭಗೊoಡು ಬಿ ಎಂ ರಸ್ತೆ ಮಾರ್ಗವಾಗಿ ನವೋದಯ ವೃತ್ತದಿಂದ ಮಾಧ್ಯಮಿಕ ಶಾಲಾ ಆವರಣಕ್ಕೆ ಕಾರ್ಯಕರ್ತರು ಜಮಾವಣೆಗೊಂಡರು.
ಚುನಾವಣಾ ಪ್ರಚಾರ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಎಚ್ ಡಿ ಕುಮಾರಸ್ವಾಮಿ, ಮಾಜಿ ಮಂತ್ರಿಗಳಾದ ಎಚ್ ಡಿ ರೇವಣ್ಣ, ಶಾಸಕರಾದ ಸಿಎನ್ ಬಾಲಕೃಷ್ಣ,ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ಕುಸುಮಾರಾಣಿ,ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾದ ಅಣತಿಚಂದ್ರಶೇಖರ್, ಎಚ್ಎಸ್ ಶ್ರೀಕಂಠಪ್ಪ, ತಾಲೂಕು ಬಿಜೆಪಿ ಅಧ್ಯಕ್ಷರಾದ ದಮ್ಮನಿಂಗಲ ರವಿ, ತಾಲೂಕು ಜೆಡಿಎಸ್ ಅಧ್ಯಕ್ಷರಾದ ಪರಮ ದೇವರಾಜೇಗೌಡ, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಶಿವನಂಜೇಗೌಡ, ಅಣತಿಆನಂದ್, ಬಿಜೆಪಿ ಮುಖಂಡರಾದ ಸಿ ವಿ ರಾಜಪ್ಪ, ಸಿ ಆರ್ ಚಿದಾನಂದ್, ಕುರುಬ ಸಮಾಜದ ಮುಖಂಡರಾದ ಕಬ್ಬಾಳು ರಮೇಶ್, ದಲಿತ ಸಮಾಜದ ಮುಖಂಡರಾದ ಕೋರದಹಳ್ಳಿ ರಾಮಚಂದ್ರ,ಬೆಳಗೀಹಳ್ಳಿ ಪುಟ್ಟಸ್ವಾಮಿ, ಸೇರಿದಂತೆ ಇತರರು ಹಾಜರಿದ್ದರು.