ಬೆಂಗಳೂರಿನಲ್ಲಿ ಕೆಲಸ ಹುಡುಕುತಿದ್ದರೆ ಇಂದೇ ಈ ಕೆಲಸಕ್ಕೆ ಅಪ್ಲೈ ಮಾಡಿ. ರಾಷ್ಟ್ರೀಯ ಜೀವ ವಿಜ್ಞಾನ ಕೇಂದ್ರ ಖಾಲಿ ಇರುವ ಹುದ್ದೆಯಾದ ಪ್ರೋಗ್ರಾಮ್ ಮ್ಯಾನೇಜರ್ ಹುದ್ದೆಗೆ ಅರ್ಜಿಯನ್ನು ಕರೆದಿದೆ. ಕೆಲಸದ ಸ್ಥಳವನ್ನು ಬೆಂಗಳೂರಿನಲ್ಲೇ ನೀಡಲಾಗುವುದು. ತಡ ಮಾಡ್ದೆ ಸೆಪ್ಟೆಂಬರ್ 20, 2024 ರ ಒಳಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ.
ಈ ಹುದ್ದೆಗೆ ಬೇಕಾದ ಅರ್ಹತೆ ಆಯ್ಕೆಯ ಪ್ರಕ್ರಿಯೆಯನ್ನು ನೋಡುವುದಾದರೆ
ಶೈಕ್ಷಣಿಕ ಅರ್ಹತೆ
ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಯಾವುದೇ ವಿವಿಯ ಅಥವಾ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ ನ್ಯಾಚುರಲ್ ಸೈನ್ಸಸ್, ಎಂಜಿನಿಯರಿಂಗ್ ಟೆಕ್ನಾಲಜಿಯಲ್ಲಿ ಸ್ನಾತಕೋತ್ತರ ಪದವಿ ಅಥವಾ
ಸೈನ್ಸ್, ಎಂಜಿನಿಯರಿಂಗ್ ಟೆಕ್ನಾಲಜಿ, ಡಾಕ್ಟರಲ್ ಡಿಗ್ರಿ, ಎಂ.ಡಿ, ಎಂ.ಎಸ್ ಗಳನ್ನು ಮಾಡಿರಬೇಕು.
ವಯೋಮಿತಿ
ಅಧಿಸೂಚಿಯ ಅನ್ವಯ ಅಭ್ಯರ್ಥಿಗೆ 45 ವರ್ಷ ಮೀರಿರಬಾರದು. ಜೊತೆಗೆ ಇತರ ಮೀಸಲಾತಿ ಪಡೆದ ಅಭ್ಯರ್ಥಿಗಳಿಗೆ ವಯಸ್ಸಿನ ಸಡಿಲಿಕೆ ಇರುತ್ತದೆ.
ಸಂಬಳ
ಈಗಾಗಲೇ ಸಂಸ್ಥೆ ತಿಳಿದಿರುವಂತೆ 1,00,600 ರೂ ಗಳನ್ನು ತಿಂಗಳಿಗೆ ನೀಡುತ್ತದೆ.
ಅರ್ಜಿಯ ಶುಲ್ಕ ಮತ್ತು ಆಯ್ಕೆಯ ಪ್ರಕ್ರಿಯೆ
ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ಇರುವುದಿಲ್ಲ.
ಆಯ್ಕೆ ಮಾಡುವಾಗ ಮೊದಲು ಶಾರ್ಟ್ ಲಿಸ್ಟ್ ಅನ್ನು ತಯಾರು ಮಾಡುತ್ತಾರೆ. ಬಳಿಕ ಲಿಖಿತ ಪರೀಕ್ಷೆಯನ್ನು ನಡೆಸಿ ಕೊನೆಯದಾಗಿ ಸಂದರ್ಶನವನ್ನು ನಡೆಸುವ ಮೂಲಕ ಆಯ್ಕೆ ಮಾಡಲಾಗುತ್ತದೆ.
ಅರ್ಜಿಯನ್ನು ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ