ಬೆಂಗಳೂರು: ಯಾವುದೇ ವ್ಯಕ್ತಿ ಮಹಿಳೆಯರ ಬಗ್ಗೆ ಲಘುವಾಗಿ ಮಾತನ್ನಾಡುತ್ತಾರೆಂದರೆ ಅವರು ಸಾರ್ವಜನಿಕ ಕ್ಷೇತ್ರದಲ್ಲಿ ಇರಲು ಯೋಗ್ಯರಲ್ಲ ಎಂದು ಕರ್ನಾಟಕ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯಾ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಸೌಮ್ಯಾ ರೆಡ್ಡಿ, ಮುನಿರತ್ನ ಮಹಿಳೆಯರ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ಇದು ಜನಪ್ರತಿನಿಧಿಯ ನಡವಳಿಕೆಯಲ್ಲ. ಹೀಗಾಗಿ, ಬಿಜೆಪಿ ಅವರನ್ನು ಶಾಸಕ ಸ್ಥಾನದಿಂದ, ಪಕ್ಷದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಮಹಿಳೆಯರು, ದಲಿತರ ಬಗ್ಗೆ ಲಘುವಾಗಿ ಮಾತನ್ನಾಡಿದ್ದಾರೆ. ಇದು ಇಡೀ ಮಹಿಳಾ ಮತ್ತು ನಾಗರಿಕ ಸಮಾಜ ಖಂಡಿಸುವ ಕೃತ್ಯವಾಗಿದ್ದು, ಪೊಲೀಸರು ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಬಿಜೆಪಿ ತಮ್ಮ ಶಾಸಕನ ವಿರುದ್ಧ ಕ್ರಮ ತೆಗೆದುಕೊಂಡು ಮಾದರಿಯಾಗಲಿ ಎಂದು ಒತ್ತಾಯಿಸಿದರು.

