ಸಿಆರ್ ಪಿಎಫ್ ನ ಕಾನ್ಸ್‌ಟೇಬಲ್ ಹುದ್ದೆಗೆ ಅರ್ಜಿಯನ್ನು ಕರೆಯಲಾಗಿದೆ. ಒಟ್ಟು 1,29,927 ಲಕ್ಷ ಹುದ್ದೆಗಳಿಗೆ ನೇಮಕಾತಿ ನಡೆಸಿಕೊಳ್ಳಲು ಅಧಿಸೂಚಿಯನ್ನು ಹೊರಡಿಸಿದೆ. ಅರ್ಜಿ ಸಲ್ಲಿಸುವುದು ಹೇಗೆ? ವಯೋಮಿತಿ, ವೇತನ ದ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಭಾರತದೆಲ್ಲೆಡೆ ಕಾರ್ಯ ನಿರ್ವಹಿಸಬೇಕು ಎಂಬ ಆಸೆಯನ್ನು ಇದ್ದರೇ ಈ ಕೆಲಸಕ್ಕೆ ಗಮನ ಕೊಡಿ. ಸಿಬ್ಬಂದಿ ಆಯ್ಕೆ ಆಯೋಗವು ಕಾನ್ಸ್‌ಟೇಬಲ್ ಹುದ್ದೆಗೆ ನೇಮಕಾತಿಯನ್ನು ನಡೆಸುತ್ತಿದೆ. ಒಟ್ಟು ಖಾಲಿ ಇರುವ ಹುದ್ದೆಗಳು 129927. ಆ ಪೈಕಿ 125262 ಹುದ್ದೆಗಳು ಪುರುಷರಿಗೆ ಹಾಗೂ 4667 ಹುದ್ದೆಗಳು ಮಹಿಳೆಯರಿಗೆ ಕರೆಯಲಾಗಿದೆ.
ವೇತನ :
ತಿಂಗಳಿಗೆ 21,700 ರಿಂದ 69,100 ನಿಗದಿಪಡಿಸಲಾಗಿದೆ.
ಅರ್ಹತೆ ಮತ್ತು ವಯೋಮಿತಿ :
SSLC ತೇರ್ಗಡೆಯಾಗಿದ್ದರೆ ಸಾಕು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅಥವಾ ಅದಕ್ಕೆ ಸರಿ ಸಮಾನವಾದ ಯಾವುದೇ ಶಿಕ್ಷಣ ಪಡೆದಿದ್ದರೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅಗ್ನಿವೀರರಿಗೆ 10 ರಷ್ಟು ಮೀಸಲಾತಿಯನ್ನು ಕಲ್ಪಿಸಲಾಗಿದೆ. ಭಾರತೀಯ ಎಲ್ಲ 18 ರಿಂದ 23 ವರ್ಷದ ಯುವಕರು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮತ್ತು ಪ್ರಾರಂಭದ ದಿನಾಂಕವನ್ನು ಪ್ರಕಟ ಮಾಡಿಲ್ಲ. ಹೆಚ್ಚಿನ ವಿವರಗಳಿಗೆ ಈ ವೆಬ್ ಸೈಟ್ ಗೆ ಭೇಟಿ ನೀಡಿ. https://crpf.gov.in/

