ಗೃಹ ಜ್ಯೋತಿ ಯೋಜನೆಯು ಈಗಾಗಲೇ ಸಾಕಷ್ಟು ಬಡ ಕುಟುಂಬಗಳಿಗೆ ಮಹತ್ತರ ಯೋಜನೆಯಾಗಿದೆ. 200 ಯುನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡುವ ಭರವಸೆಯನ್ನು ನೀಡಿದ್ದ ರಾಜ್ಯ ಸರ್ಕಾರ ಈ ವರೆಗೆ ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ. ಕಳೆದ ಆಗಸ್ಟ್ ನಿಂದ ಡಿ ಲಿಂಕ್ ಎಂಬ ಹೊಸ ಯೋಜನೆಯನ್ನು ಗೃಹ ಜ್ಯೋತಿಗೆ ಸೇರಿಸಿದೆ. ಏನಿದು ಡಿ ಲಿಂಕ್ ಈ ಬಗ್ಗೆ ತಿಳಿಯೋಣ ಬನ್ನಿ.
ಡಿ-ಲಿಂಕ್ ಯೋಜನೆ
ಇಂದು ಬೆಂಗಳೂರಿನಲ್ಲಿ ಲಕ್ಷಾಂತರ ಮಂದಿ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಈ ಡಿ ಲಿಂಕ್ ಯೋಜನೆಯಿಂದಾಗಿ ಆವರು ಮೊದಲು ವಾಸ ಮಾಡುತ್ತಿದ್ದ ಮನೆಯ ಆರ್ ಆರ್ ನಂಬರ್ ಅನ್ನು ಆಧಾರ್ ಗೆ ಲಿಂಕ್ ಮಾಡಿ ಗೃಹ ಜ್ಯೋತಿಯ ಫಲವನ್ನು ಪಡೆಯಲಾಗುತ್ತಿತ್ತು. ಈಗ ಅವರು ಮನೆಯನ್ನು ಬದಲಾಯಿಸಿದರೆ ಅವರ ಆಧಾರ ನಲ್ಲಿರುವ ಆರ್ ಆರ್ ಸಂಖ್ಯೆಯನ್ನು ಡಿ ಲಿಂಕ್ ಮಾಡಿದ್ರೆ ಆ ಮನೆಯಲ್ಲಿ ಇದ್ದ ಉಚಿತ ವಿದ್ಯುತ್ ಈ ಮನೆಯಲ್ಲಿಯೂ ಪಡೆಯಬಹುದಾಗಿದೆ. ಈ ಸೌಲಭ್ಯವನ್ನು https://sevasindhu.karnataka.gov.in/ ಅಲ್ಲಿ ಪಡೆಯಬಹುದಾಗಿದೆ.
ಈ ಯೋಜನೆಯು ಈಗಾಗಲೇ ಜಾರಿಯಲ್ಲಿದ್ದು ಹುಬ್ಬಳಿಯ ಸುಮಾರು ಏಳು ಜಿಲ್ಲೆಗಳಲ್ಲಿ 33.25 ಲಕ್ಷ ಜನರು ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಈ ಯೋಜನೆಯು ಜಾರಿಗೆ ಬರುವುದಕ್ಕಿಂತ ಮೊದಲು ಮನೆಯನ್ನು ಬದಲಾಯಿಸಿದರೆ ಸೌಲಭ್ಯದಿಂದ ವಂಚಿತರಾಗುತ್ತಿದ್ದರು. ಇದನ್ನು ತಪ್ಪಿಸಲು ಹೊಸ ಯೋಜನೆಯನ್ನು ಸೇರಿಸಲಾಗಿದೆ ಎಂದು ಜಾರ್ಜ್ ಹೇಳಿದ್ದಾರೆ.

