ಅಪರಾಧ ಸುದ್ದಿ

ಅಫೀಮು ಮಾರುತ್ತಿದ್ದಾರೆಂದು ಅಮಾಯಕರನ್ನು ಜೈಲಿಗಟ್ಟಿದ್ದ ಪೊಲೀಸರ ಅಮಾನತು

Share It

ಬೆಂಗಳೂರು: ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಅಫೀಮು ಮಾರುತ್ತಿದ್ದಾರೆಂದು ಅಮಾಯಕರನ್ನು ಜೈಲಿಗಟ್ಟಿದ್ದ ಬೆಂಗಳೂರಿನ ಬನಶಂಕರಿ ಠಾಣೆ ಪಿಎಸ್​ಐ ಸೇರಿದಂತೆ ನಾಲ್ವರ ಪೊಲೀಸರನ್ನು ಅಮಾನತು ಮಾಡಲಾಗಿದೆ.

ಬನಶಂಕರಿ ಠಾಣೆ ಪಿಎಸ್ಐ ಶ್ರೀಧರ್ ಗುಗ್ರಿ, ಎಎಸ್ಐ ಎಸ್.ಕೆ.ರಾಜು, ಕಾನ್ಸ್​ಟೇಬಲ್​ಗಳಾದ ಸತೀಶ್ ಬಗಲಿ, ತಿಮ್ಮಪ್ಪ ಪೂಜಾರ ಅಮಾನತುಗೊಳಿಸಿ ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಜಗಲಾಸರ್ ಆದೇಶ ಹೊರಡಿಸಿದ್ದಾರೆ.

ಸುಳ್ಳು ಮಾಹಿತಿ ನೀಡಿ ದೂರು ದಾಖಲಿಸಿದ್ದ ಬೆಂಗಳೂರಿನ ಸುಬ್ರಹ್ಮಣ್ಯಪುರ ಎಸಿಪಿ ಸ್ಕ್ವಾಡ್​ನಿಂದ ರಾಜನ್, ಚೈತ್ರಾ ಕೂಡ ಬಂಧನ ಮಾಡಲಾಗಿದೆ. ಕದಿರೇನಹಳ್ಳಿಯ ಇಬ್ಬರ ವಿರುದ್ಧ ಸುಳ್ಳು ಎನ್​ಡಿಪಿಎಸ್​ ಕೇಸ್ ದಾಖಲಿಸಿ ಜೈಲು ಕಳುಹಿಸಲಾಗಿತ್ತು.

ವೈಯಕ್ತಿಕ ದ್ವೇಷದ ಹಿನ್ನೆಲೆ ಅಫೀಮು ಮಾರುತ್ತಿದ್ದಾರೆಂದು ಕದಿರೇನಹಳ್ಳಿಯ ಇಬ್ಬರ ವಿರುದ್ಧ ರಾಜನ್, ಚೈತ್ರಾ ಸುಳ್ಳು ಕೇಸ್ ದಾಖಲಿಸಿ ಜೈಲಿಗಟ್ಟಿದ್ದಾರೆಂದು ಕಮಿಷನರ್​​ಗೆ ಜೈಲಿಗೆ ಹೋಗಿದ್ದವರ ಸಂಬಂಧಿಕರು ಆಯುಕ್ತರಿಗೆ ದೂರು ನೀಡಿದ್ದರು.

ಹಾಗಾಗಿ ತನಿಖೆ ನಡೆಸಿ ಸುಳ್ಳು ಕೇಸ್ ದಾಖಲಿಸಿ ಜೈಲಿಗಟ್ಟಿದ್ದ ಪೊಲೀಸರ ಸಸ್ಪೆಂಡ್ ಮಾಡಲಾಗಿದ್ದು, ತಪ್ಪು ಮಾಹಿತಿ ನೀಡಿದ್ದ ರಾಜನ್, ಚೈತ್ರಾರನ್ನು ಪೊಲೀಸರು ಬಂಧಿಸಿದ್ದಾರೆ.


Share It

You cannot copy content of this page